Advertisement

ಸೋಂಕಿತರ ಸಂಬಂಧಿಗಳಿಗೆ ಉಚಿತ ದಾಸೋಹ

10:01 PM May 11, 2021 | Shreeraj Acharya |

ಶಿವಮೊಗ್ಗ: ನಗರದ ಗಾಂ ಧಿಬಜಾರ್‌ ಸಗಟು ವ್ಯಾಪಾರಿಗಳ ಸಂಘ ಮುಂದಿನ 40 ದಿನಗಳ ಕಾಲ ಕೋವಿಡ್‌ ಸೋಂಕಿತರನ್ನು ಆಸ್ಪತ್ರೆಗೆ ಕರೆತಂದಿರುವ ಸಂಬಂ ಧಿಗಳಿಗೆ ಪ್ರತಿನಿತ್ಯ ಉಚಿತವಾಗಿ ಊಟ, ತಿಂಡಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

Advertisement

ರೋಗಿಗಳೊಂದಿಗೆ ಆಸ್ಪತ್ರೆಗೆ ಬರುವ ಅವರ ಸಂಬಂಧಿಗಳಿಗೆ ಸದ್ಯ ಊಟ-ತಿಂಡಿ ಸಮಸ್ಯೆ ಉಂಟಾಗಿರುವುದನ್ನು ಮನಗಂಡು ಗಾಂಧಿಬಜಾರ್‌ ಸಗಟು ದಿನಸಿ ವ್ಯಾಪಾರಿಗಳ ಸಂಘ ಪ್ರತಿನಿತ್ಯ 500 ಜನರಿಗೆ ಉಚಿತವಾಗಿ ಊಟ ತಿಂಡಿ ನೀಡುವ ವ್ಯವಸ್ಥೆ ಕಲ್ಪಿಸಿದೆ.

ವ್ಯಾಪಾರಿಗಳ ಸಂಘದ ಈ ಸೇವೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಚಾಲನೆ ನೀಡಿ ಮಾತನಾಡಿ, ಕೋವಿಡ್‌ ಸಂಕಷ್ಟ ಸಂದರ್ಭದಲ್ಲಿ ಈಗಾಗಲೇ ಹಲವಾರು ಸಂಘ-ಸಂಸ್ಥೆಗಳು ವಿವಿಧ ರೀತಿಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ಸಂಘ ಸಂಸ್ಥೆಗಳು ಸೇವಾ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಸೇವಾಭಾರತಿ, ಕೋವಿಡ್‌ ಸುರûಾ ಪಡೆ, ಐಎಂಎ,  ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಅನೇಕ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಜನ ಸಂಕಷ್ಟದಲ್ಲಿ ಸಿಲುಕಿರುವ ಈ ಹೊತ್ತಿನಲ್ಲಿ ಸಂಘ-ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿರುವವರ ಸಹಾಯಕ್ಕೆ ಧಾವಿಸಬೇಕು ಎಂದು ಹೇಳಿದರು.

ಕೋವಿಡ್‌-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್‌ ಡೌನ್‌ ಜಾರಿಮಾಡಿದೆ. ಮೊದಲ ದಿನ ಕೆಲವರು ತೊಂದರೆ ಅನುಭವಿಸಿರುವುದಾಗಿ ತಿಳಿದುಬಂದಿದೆ. ಆದರೆ ಲಾಕ್‌ಡೌನ್‌ಗೆ ಸಂಪೂರ್ಣ ಜನ ಬೆಂಬಲ ವ್ಯಕ್ತವಾಗಿದೆ. ಪ್ರತಿಯೊಬ್ಬರೂ ನಿಯಮ ಪರಿಪಾಲನೆ ಮಾಡುತ್ತಿ¨ªಾರೆ. ಅತಿ ಹೆಚ್ಚು ಜನ ಮನೆಯಿಂದ ಹೊರ ಬಂದಿಲ್ಲ. ಮುಂದಿನ 14 ದಿನಗಳ ಕಾಲ ಇದೇ ರೀತಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತದೆ ನಿಜ. ಆದರೆ  ಯಾವುದಕ್ಕೂ ಕೊರತೆಯಾಗದಂತೆ ನಿರ್ವಹಿಸಿಕೊಂಡು ಹೋಗಲಾಗುತ್ತಿದೆ. ಯಾವುದಕ್ಕೂ ಹಾಹಾಕಾರ ಉಂಟಾಗಿಲ್ಲ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯರು, ಶುಶ್ರೂಷಕರು, ಡಿ ದರ್ಜೆ ನೌಕರರು, ಆಕ್ಸಿಜನ್‌ ಇದ್ಯಾವುದಕ್ಕೂ ಕೊರತೆಯಾಗದಂತೆ ನಿಭಾಯಿಸಿಕೊಂಡು ಹೋಗಲಾಗುತ್ತಿದೆ ಎಂದರು.

ಕಟ್ಟುನಿಟ್ಟಾಗಿ ಲಾಕ್‌ ಡೌನ್‌ ಜಾರಿಗೆ ಕೈಗಾರಿಕೋದ್ಯಮಿಗಳು ವರ್ತಕರು ಸಂಘ-ಸಂಸ್ಥೆಗಳ ಪದಾಧಿ ಕಾರಿಗಳು ಭಾನುವಾರ ನಡೆದ ಸಭೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಮೊದಲ ದಿನ ಕೆಲವೊಂದು ಸಮಸ್ಯೆ ಉಂಟಾಗಿದೆ. ಆ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ದಿಕ್ಕಿನಲ್ಲಿ ಅಧಿ ಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಕೃಷಿ ಚಟುವಟಿಕೆಗಳಿಗೆ ಹೋಗುವವರು ಹಾಲು ವಿತರಣೆ ಮಾಡುವವರಿಗೆ ತೊಂದರೆಯಾಗಿದೆ ಎಂಬ ದೂರು ಕೇಳಿ ಬಂದಿದೆ. ಪರಿಹಾರ ಕಂಡುಕೊಳ್ಳಲಾಗುವುದು. ದಿನಸಿ, ಹಾಲು, ತರಕಾರಿ, ಔಷ ಧ ಇವುಗಳಿಗೆ ತೊಂದರೆಯಾಗಬಾರದು ಇದನ್ನು ಪೂರೈಸುವ ವ್ಯಕ್ತಿಗಳಿಗೆ ಪಾಸ್‌ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಪ್ರಮುಖರಾದ ಪಟ್ಟಾಭಿರಾಮ್‌, ಗಿರೀಶ್‌ ಕಾರಂತ್‌, ಡಿ.ಎಸ್‌.ಅರುಣ್‌ ಹಾಗೂ ಗಾಂಧಿ ಬಜಾರಿನ ವರ್ತಕರ ಸಂಘದ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next