Advertisement

ನನ್ನ ಪ್ರಕಾರ ಟೈಟಲ್‌ ಟ್ರ್ಯಾಕ್‌ನಲ್ಲಿ ಶಿವಂ ಧ್ವನಿ

09:39 AM Aug 08, 2019 | Team Udayavani |

ಪ್ರಿಯಾಮಣಿ ಹಾಗೂ ಕಿಶೋರ್‌ ಮುಖ್ಯಭೂಮಿಕೆಯಲ್ಲಿರುವ “ನನ್ನ ಪ್ರಕಾರ’ ಚಿತ್ರ ಆಗಸ್ಟ್‌ 23 ರಂದು ತೆರೆಕಾಣುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಮೊದಲ ಹಂತವಾಗಿ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗುತ್ತಿದೆ. ಚಿತ್ರದ ಟೈಟಲ್‌ ಟ್ರ್ಯಾಕ್‌ ಇಂದು (ಆ.07) ಸಂಜೆ ಐದು ಗಂಟೆಗೆ ಬಿಡುಗಡೆಯಾಗುತ್ತಿದೆ.

Advertisement

ಈ ಟೈಟಲ್‌ ಟ್ರ್ಯಾಕ್‌ನ ವಿಶೇಷವೆಂದರೆ ತಮಿಳಿನ “ವಿಕ್ರಂ ವೇದ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಹಾಡಿರುವಂತಹ ಗಾಯಕ ಶಿವಂ “ನನ್ನ ಪ್ರಕಾರ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಅನ್ನು ಹಾಡಿದ್ದಾರೆ. ಆರಂಭದಲ್ಲಿ ಚಿತ್ರತಂಡ ಈ ಹಾಡನ್ನು ಯಾರಿಂದ ಹಾಡಿಸೋದು ಎಂದು ಆಲೋಚಿಸಿದಾಗ ಅವರ ಕಣ್ಣಮುಂದೆ ಬಂದಿದ್ದ ಶಿವಂ ಮುಖ. ಅದರಂತೆ ಶಿವಂ ಕೂಡಾ ಹಾಡಿದ್ದಾರೆ. ಚಿತ್ರಕ್ಕೆ “ಬಹದ್ದೂರ್‌’ ಚೇತನ್‌ ಅವರ ಸಾಹಿತ್ಯವಿದೆ.

ಕ್ರೈಮ್‌ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಇದಾಗಿದ್ದು, ಹಾಡು ಕೂಡಾ ಕ್ರೈಮ್‌ನ ಕರಾಳ ಮುಖವನ್ನು ಬಿಂಬಿಸುತ್ತದೆಯಂತೆ. ಚೇತನ್‌ ಅವರಿಗೆ ಇಡೀ ಚಿತ್ರಕಥೆ ಹೇಳಿಯೇ ಹಾಡು ಬರೆಸಿದ್ದಾಗಿ ಚಿತ್ರದ ನಿರ್ದೇಶಕ ವಿನಯ್‌ ಬಾಲಾಜಿ ಹೇಳುತ್ತಾರೆ. ಹಾಗಾಗಿಯೇ ಸಾಹಿತ್ಯ ಹಾಗೂ ದೃಶ್ಯಗಳು ಚೆನ್ನಾಗಿ ಹೊಂದಿಕೆಯಾಗಿದೆಯಂತೆ. ಚಿತ್ರಕ್ಕೆ ಅರ್ಜುನ್‌ ರಾಮು ಅವರ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next