Advertisement

ಸಿಎಂ ಹಸ್ತಕ್ಷೇಪಕ್ಕೆ ಶಿವಳ್ಳಿ ನೊಂದಿದ್ದರು

01:27 AM May 10, 2019 | Sriram |

ಬಳ್ಳಾರಿ: ‘ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ದಿ. ಸಿ.ಎಸ್‌. ಶಿವಳ್ಳಿಯವರ ಇಲಾಖೆಯಲ್ಲಿ ಮುಖ್ಯಮಂತ್ರಿ ಸೇರಿ ಹಲವರು ಕೈಯಾಡಿಸುತ್ತಿದ್ದರು. ಇದರಿಂದ ಶಿವಳ್ಳಿಯವರು ನೊಂದಿದ್ದರು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೇನೆ ಹೊರತು, ಇನ್ಯಾವುದೇ ದುರುದ್ದೇಶದಿಂದ ಅಲ್ಲ. ನನ್ನ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿ.ಎಸ್‌.ಶಿವಳ್ಳಿ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು. ಅವರಿಗೆ ಸಚಿವ ಸ್ಥಾನ ಯಾವಾಗಲೋ ಸಿಗಬೇಕಿತ್ತು. ಆದರೆ, ಅವರನ್ನು ಹಿಂದಿಕ್ಕಿ ಹೊಸಬರನ್ನು ಸಚಿವರನ್ನಾಗಿ ಮಾಡುವ ಮೂಲಕ ಅವರನ್ನು ಮೂಲೆಗುಂಪು ಮಾಡಿದ್ದರು. ಕೊನೆಗೂ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಅವರ ಇಲಾಖೆಯಲ್ಲಿ ಅವರಿಗೇ ಸ್ವಾತಂತ್ರ ಇರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಹಲವರು ‘ಕೈ’ಯಾಡಿಸುತ್ತಿದ್ದರು. ಇದರಿಂದ ಶಿವಳ್ಳಿಯವರು ನೊಂದಿದ್ದರು. ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿರಬಹುದು ಎಂಬ ಅರ್ಥದಲ್ಲಿ ನಾನು ಹೇಳಿದ್ದೇನೆ’ ಎಂದರು.

‘ಈ ಮಧ್ಯೆ ಶಿವಳ್ಳಿ ಅವರು ಬಿಜೆಪಿಗೆ ಸೇರುವ ಕುರಿತು ಮಾತುಕತೆ ನಡೆದಿತ್ತು. ಅಷ್ಟರೊಳಗೆ ಇಷ್ಟೆಲ್ಲಾ ದುರಂತ ನಡೆಯಿತು. ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶವಿಲ್ಲ. ಇದನ್ನು ಬೇರೆ ರೀತಿಯಲ್ಲಿ ಅಥೈರ್ಸಲಾಗುತ್ತಿದೆ. ಇದೇ ವಿಷಯಕ್ಕೆ ಹುಬ್ಬಳ್ಳಿಯಲ್ಲಿ ನನ್ನ ವಿರುದ್ಧ ದೂರನ್ನೂ ದಾಖಲಿಸುತ್ತಿದ್ದಾರೆ ಎಂಬ ಮಾಹಿತಿ ಇದೆ’ ಎಂದರು.

ಶಿವಳ್ಳಿ ನಿಧನಾನಂತರ ಉಪಚುನಾವಣೆ ನಡೆಯುತ್ತಿರುವ ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ ಪರ ವಾತಾವರಣ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದ ಅವರು, ಉಪಚುನಾವಣೆಯಲ್ಲಿ ಜಯಗಳಿಸಲಿದ್ದಾರೆ. ಜತೆಗೆ ಚಿಂಚೋಳಿ ಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next