Advertisement

ಕನಸಿನಲ್ಲಿ ಕಂಡ ಶಿವಲಿಂಗ: ಬಂಡೆಗಳ ನಡುವೆ ಪತ್ತೆ.!

02:07 PM Feb 16, 2022 | Team Udayavani |

ನಾಗಮಂಗಲ: ತಾಲೂಕಿನ ನೀಲಕಂಠನಹಳ್ಳಿಯ ಜಗದೀಶ್‌ ಎಂಬುವವರಿಗೆ ಕಳೆದ ಎರಡು ವರ್ಷ ಗಳಿಂದ ಕಾರ್ತಿಕ ಮಾಸ ಮತ್ತು ಶಿವರಾತ್ರಿ ಸಮಯದಲ್ಲಿ ಗ್ರಾಮದಲ್ಲಿ ಸಮೀಪದ ಕರಿಕಲ್ಲು ಗುಡ್ಡದಲ್ಲಿ ಶಿವಲಿಂಗ ಇರುವಂತೆ ಕನಸು ಬೀಳುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ತಿಳಿಸಿ ಗುಡ್ಡದಲ್ಲಿದ್ದ ಬೇಲಿಯನ್ನು ತೆಗೆಸುವ ಸಂದರ್ಭದಲ್ಲಿ ಗುಡ್ಡದಲ್ಲಿದ್ದ ಬಂಡೆಗಳ ನಡುವೆ ಶಿವಲಿಂಗ, ಪಕ್ಕದಲ್ಲೇ ನಂದಿ ವಿಗ್ರಹವೂ ಸಹ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

Advertisement

ಗ್ರಾಮದ ಹಲವು ಜನರು ಶಿವಲಿಂಗ ಮತ್ತು ನಂದಿ ವಿಗ್ರಹ ಸಿಕ್ಕಿರುವ ಜಾಗದಲ್ಲಿ ಬಂಡೆಗಳು ಸೇರಿದಂತೆ ಗಿಡಗಳನ್ನು ತೆರವುಗೊಳಿಸಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಶಿವಲಿಂಗಕ್ಕೆ ನೆರಳುಲಾಗುವಂತೆ ಚಪ್ಪರವನ್ನು ಹಾಕಿದ್ದಾರೆ. ಗ್ರಾಮದ ಹಲವು ಜನ ಅನುಮಾನಗೊಂಡರೆ, ಸುತ್ತಮುತ್ತಲಿನ ಗ್ರಾಮಗಳ ಜನರು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.

ನನಗೆ ಸುಮಾರು ಎರಡು ವರ್ಷದಿಂದ ಗ್ರಾಮದ ಕರಿಕಲ್ಲು ಗುಡ್ಡದಲ್ಲಿ ಲಿಂಗವಿರುವಂತೆ ಕನಸು ಬೀಳುತ್ತಿದ್ದ ಹಿನ್ನೆಲೆಯಲ್ಲಿ ಭೂಗರ್ಭಶಾಸ್ತ್ರಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗಿತ್ತು. ಅವರು ಗುಡ್ಡದಲ್ಲಿ ಕೆಲ ಜಾಗವನ್ನು ಸೂಚಿಸಿ ಈ ವ್ಯಾಪ್ತಿಯಲ್ಲಿ ಯಾವುದಾದರೂ ವಸ್ತುಗಳಿರಬಹುದು ಎಂದು ತಿಳಿಸಿದ್ದರು.

ಅದನ್ನು ಗ್ರಾಮದ ಜನರಿಗೆ ತಿಳಿಸಿ ಗುಡ್ಡವನ್ನು ನನ್ನ ಸ್ವಂತ ಹಣದಲ್ಲಿ ಸ್ವತ್ಛ ಮಾಡುವ ಸಮಯದಲ್ಲಿ ಬಂಡೆಗಳ ನಡುವೆ ಶಿವಲಿಂಗ ಮತ್ತು ನಂದಿ ವಿಗ್ರಹ ಪತ್ತೆಯಾಗಿದ್ದು, ಪೂಜೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಮತ್ತು ಜ್ಯೋತಿಷಿಗಳ ಸಲಹೆ ಪಡೆದು ಒಂದು ಪುಟ್ಟ ದೇವಾಲಯವನ್ನು ನಿರ್ಮಾಣ ಮಾಡಲು ಕ್ರಮ ವಹಿಸುತ್ತೇನೆ ಎಂದು ಜಗದೀಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next