Advertisement
ಪಕ್ಷದ ಕಚೇರಿಯಲ್ಲಿ ಸುದ್ದಿ ಗಾರರ ಜತೆ ಮಾತನಾಡಿದ ಅವರು, ಯಾರೇ ಭ್ರಷ್ಟಾಚಾರ ನಡೆಸಿದರೂ ನಮ್ಮ ಪಕ್ಷ ಸಹಿಸುವುದಿಲ್ಲ. ಮಾಡಾಳು ವಿರೂಪಾಕ್ಷಪ್ಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ವರದಿ ಕೇಳಿದ್ದೇನೆ. ಆ ವರದಿಯನ್ನು ಪಕ್ಷದ ಸಂಸದೀಯ ಮಂಡಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಯಾವುದೇ ಆಸೆ ಆಕಾಂಕ್ಷೆಗಳು ಇಲ್ಲದೆ ಇಂದು ಅನ್ಯ ಪಕ್ಷದ ಮುಖಂಡರು ಬಿಜೆಪಿ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯ ವೈಖರಿ, ಬಿಜೆಪಿ ಸಿದ್ಧಾಂತ, ಬೊಮ್ಮಾಯಿ ಸರಕಾರದ ಸಾಧನೆಗಳನ್ನು ಮೆಚ್ಚಿ ಪಕ್ಷಕ್ಕೆ ಬಂದಿದ್ದಾರೆ. ಇವರೆಲ್ಲರೂ ಪಕ್ಷದ ಕೆಲಸ ಮಾಡಿ ಎತ್ತರಕ್ಕೆ ಬೆಳೆಯುತ್ತಾರೆ. ರಾಜ್ಯದಲ್ಲೂ ಪಕ್ಷದ ಪರವಾದ ಅಲೆ ಬೀಸುತ್ತಿದೆ. ಅತೀ ಹೆಚ್ಚು ಜನರು ಬಿಜೆಪಿ ಕಡೆ ಬರುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ನರೇಂದ್ರ ಮೋದಿ ಯೋಜನೆಗಳು ಜನರ ಮನಸನ್ನು ಸೆಳೆದಿವೆ. ಬೊಮ್ಮಾಯಿ, ಯಡಿಯೂರಪ್ಪ ಸರಕಾರದ ಸಾಧನೆಗಳು ಕೂಡ ಜನರ ವಿಶ್ವಾಸ ಗಳಿಸಿವೆ. ನಾಲ್ಕು ಯಾತ್ರೆ ಗಳು ಕೂಡ ಅಭೂತಪೂರ್ವ ಯಶಸ್ಸು ಕಾಣುತ್ತಿವೆ ಎಂದರು.
Related Articles
ದೇಶಾದ್ಯಂತ ಕಾಂಗ್ರೆಸ್ ದುಸ್ಥಿತಿಯಲ್ಲಿದ್ದರೆ ರಾಜ್ಯದಲ್ಲಿ ಕೆಲವರು ಮುಖ್ಯಮಂತ್ರಿಯಾಗುವುದಕ್ಕೆ ಶರ್ಟ್-ಪ್ಯಾಂಟ್ ಹೊಲಿಸಿಕೊಂಡು ಕಾಯುತ್ತಿದ್ದಾರೆ. ಆದರೆ ಅವರ ಆಸೆ ಎಂದಿಗೂ ನನಸಾಗುವುದಿಲ್ಲ. ಬಿಜೆಪಿ 150 ಸ್ಥಾನ ಗೆದ್ದೇ ಗೆಲ್ಲುತ್ತದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಗ್ಗೆ ವ್ಯಂಗ್ಯವಾಡಿದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದಾಗ ಅವನನ್ನು ಅಮಾಯಕ ಎಂದು ಕರೆದಿದ್ದರು. ಅಂಥವರ ವಿರುದ್ಧ ಕ್ರಮ ಕೈಗೊಂಡರೆ ಇದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಹಾಗಾದರೆ ಕಾಂಗ್ರೆಸ್ ಮೂಲಭೂತವಾದಿ ಸಂಘಟನೆಗಳ ಪರವಲ್ಲವೇ ಎಂದು ಕಟೀಲ್ ಪ್ರಶ್ನಿಸಿದರು.
Advertisement