Advertisement

ಶಿವಕುಮಾರ ಮಹಾಸ್ವಾಮೀಜಿಗಳ 110ನೇ ಗುರುವಂದನೆ

04:46 PM Mar 18, 2017 | |

ಸಿದ್ಧಗಂಗಾ ಮಠದ ಕೀರ್ತಿ ಶಿಖರಕ್ಕೆ ಹೊಂಗಳಸವಾಗಿರುವ ಕಾಯಕಯೋಗಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು 110ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ 110ನೇ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೇಲಿ ಮಠದ ಶಿವಾನುಭವ ಚರಮೂರ್ತಿ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯ ವೀರಶೈವ ವಿದ್ಯಾಭಿವೃದ್ಧಿ ಅಧ್ಯಕ್ಷರಾದ ಬಿ.ಎಸ್‌ ಪರಮಶಿವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪರಮಪೂಜ್ಯ ಶ್ರೀಗಳ ಸ್ತಬ್ಧಚಿತ್ರ ಹೊತ್ತ ಶೋಭಾಯಾತ್ರೆ ಈಗಾಗಲೇ ಆರಂಭವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಾ ಬೆಂಗಳೂರನ್ನು ಮಾರ್ಚ್‌ 19ರಂದು ತಲುಪಲಿದೆ. ಮಾರ್ಚ್‌ 20ರಂದು ಬೆಂಗಳೂರಿನ ಪ್ರಮುಖ ಬಡಾವಣೆಗಳಿಗೆ ಈ ಶೋಭಾಯಾತ್ರೆ ಪ್ರಯಾಣ ಬೆಳೆಸಲಿದೆ. 

Advertisement

ಎಲ್ಲಿ?: ಶ್ರೀ ಬಸವೇಶ್ವರ ಸುಜ್ಞಾನ ಮಂಟಪ, ದೂರವಾಣಿ ಕೇಂದ್ರ ಪಕ್ಕ, ವಿಜಯನಗರ
ಯಾವಾಗ?: ಮಾರ್ಚ್‌ 19, ಸಂಜೆ 4.30

Advertisement

Udayavani is now on Telegram. Click here to join our channel and stay updated with the latest news.

Next