Advertisement

ಎಲ್ಲಾ ಧರ್ಮವನ್ನು ಸಮಾನ ಕಂಡಿದ್ದ ಶಿವಾಜಿ

08:20 PM Feb 19, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಛತ್ರಪತಿ ಶಿವಾಜಿ ದೇಶದ ಇತಿಹಾಸ ಪುಟಗಳಲ್ಲಿ ಮರೆಯಲಾಗದ ನಕ್ಷತ್ರ. ಅವರ ಕಾಲಾವಧಿಯಲ್ಲಿ ಇದ್ದ ಅರಸರಲ್ಲಿ ವಿಭಿನ್ನವಾಗಿ ಕಾಣುವಂತಹ ಅರಸರಾಗಿದ್ದರು. ಸಮಾಜದಲ್ಲಿ ಧರ್ಮ ಜಾತಿ ಎನ್ನದೇ ಎಲ್ಲರನ್ನು ಸಮಾನವಾಗಿ ಕಾಣುವಂತಹರಾಗಿದ್ದರು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಇತಿಹಾಸ ಪ್ರಾಧ್ಯಾಪಕ ರಂಗನಾಥ್‌ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿರವರ 390ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ಆಹಾರ ಮತ್ತು ಕೃಷಿಗೆ ಒತ್ತು ನೀಡಿದ್ದರು. ಇದರಿಂದ ಶಿವಾಜಿಯವರನ್ನು ಕೃಷಿಕ ಭೂಷಣ ಎಂದು ಕರೆಯುತ್ತಿದ್ದರು ಎಂದರು.

ಎಲ್ಲಾ ವರ್ಗಕ್ಕೆ ಸೇರಿದವರು: ಶಿವಾಜಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಕಲ್ಪಿಸಲು ಮುಂದಾಗಿದ್ದರು. ಎಲ್ಲಾ ಜನರು ಸ್ವಂತಂತ್ರವಾಗಿ ಸ್ವಾವಲಂಬಿ ಜೀವನ ನಡೆಸುವ ಅವಕಾಶ ನೀಡಿದ್ದರು ಹಾಗೂ ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುವಂತವರಾಗಿದ್ದರು. ದೇವರ ಆರಾಧನೆ ಭಿನ್ನವಾಗಿದ್ದರೆ ಎಲ್ಲಾ ಧರ್ಮದವರ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ಒಂದು ವರ್ಗಕ್ಕೆ ಸೇರುವುದಕ್ಕಿಂತ ಎಲ್ಲಾ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದರು.

ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ ಮಾತನಾಡಿ, ಶಿವಾಜಿಯಂತಹ ಮಹಾನ್‌ ವ್ಯಕ್ತಿಯ ಜೀವನ ತತ್ವದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಂಡು ರಾಜ್ಯವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಮುಂದಾಗಬೇಕೆಂದರು. ಛತ್ರಪತಿ ಶಿವಾಜಿ ಆಡಳಿತ ವೈಖರಿಯನ್ನು ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರು ಮರಾಠ ವಂಶದಲ್ಲಿ ಹುಟಿದ್ದರೂ ಸಹ ದೇಶಕ್ಕೆ ಅವರ ಚರಿತ್ರೆ ಅವಶ್ಯಕವಾಗಿದೆ ಎಂದರು.

ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ ಮಾತನಾಡಿ, ಛತ್ರಪತಿ ಶಿವಾಜಿಯನ್ನು ಸಾಹಿತ್ಯ, ಇತಿಹಾಸದ ಮೂಲಕ ನಾವು ತಿಳಿದುಕೊಳ್ಳಬೇಕಿರುತ್ತದೆ. ಶಿವಾಜಿ ತಮ್ಮ ಆಡಳಿತ ಅವಧಿಯಲ್ಲಿ ಉತ್ತಮ ಆಡಳಿತ ನಡೆಸಿ ಮಾದರಿಯಾಗಿದ್ದಾರೆ. ಅವರ ಕಾಲದಲ್ಲಿ ಜಮಿನಾªರಿ ಪದ್ಧತಿ ಹೆಚ್ಚಾಗಿ ನಡೆಯುತ್ತಿತ್ತು.

Advertisement

ಅಂತಹ ಪದ್ಧತಿಯನ್ನು ತಡೆದು ರೈತರಿಗೆ ಸ್ವಂತಿಕೆಯಿಂದ ವ್ಯವಸಾಯ ಮಾಡಲು ಅವಕಾಶವನ್ನು ಶಿವಾಜಿಯವರು ಮಾಡಿಕೊಟ್ಟರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯರಾದ ಲೀಲಾ ವೆಂಕಟೇಶ್‌, ನಾರಾಯಣಪ್ಪ, ಕಸ್ತೂರಿ ಕರ್ನಾಟಕ ಜನಪರ‌ ವೇದಿಕೆ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್‌ ಸೇರಿದಂತೆ ತಾಲೂಕು ಕಚೇರಿಯ ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ: ಚಿಕ್ಕಬಳ್ಳಾಪುರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರನ್ನು ಗುರುತಿಸಿ ಫ‌ಲ ತಾಂಬೂಲ ನೀಡಿ ಸನ್ಮಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next