Advertisement

ಅಖಂಡ ಭಾರತ ನಿರ್ಮಾಣದ ಕನಸು ಕಂಡಿದ್ದ ಶಿವಾಜಿ: ಪ್ರಕಾಶ

03:23 PM Feb 20, 2018 | Team Udayavani |

ಯಾದಗಿರಿ: ಛತ್ರಪತಿ ಶಿವಾಜಿ ಒಬ್ಬ ಉತ್ತಮ ಆಡಳಿತಗಾರ ಮತ್ತು ಅಖಂಡ ಭಾರತ ನಿರ್ಮಾಣದ ಕನಸು ಕಂಡ
ಮಹಾನ್‌ ದೇಶಾಭಿಮಾನಿಯಾಗಿದ್ದ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಹೇಳಿದರು.

Advertisement

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರ ಸಭೆ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತ್ಯುತ್ಸವ ಉದ್ದೇಶಿಸಿ ಅವರು ಮಾತನಾಡಿದರು. 

ನಗರಸಭೆ ಉಪಾಧ್ಯಕ್ಷ ಸ್ಯಾಮಸನ್‌ ಮಾಳಿಕೇರಿ ಮಾತನಾಡಿ, ಛತ್ರಪತಿ ಶಿವಾಜಿ ಪ್ರಮುಖ ನೀತಿಗಳನ್ನಿಟ್ಟುಕೊಂಡು ಉತ್ತಮ ಆಡಳಿತ ನಡೆಸಿದ ಮಹಾನ್‌ ಹೋರಾಟಗಾರ. ಅಲ್ಲದೆ ಜಾತಿ, ಧರ್ಮ ಮೀರಿ ಸರ್ವಧರ್ಮೀಯರು ಸಹಬಾಳ್ವೆಯೊಂದಿಗೆ ಬಾಳಬೇಕು ಎಂಬುದು ಶಿವಾಜಿ ಅವರ ಉದ್ದೇಶವಾಗಿತ್ತು. ನ್ಯಾಯ, ನೀತಿ, ನಿಷ್ಠುರತೆಯಿಂದ ಕೂಡಿದ್ದ ಶಿವಾಜಿ ಅವರ ಕಾರ್ಯವೈಖರಿ ಆಡಳಿತ ಇಂದಿಗೂ ಆದರ್ಶ ಎಂದು ತಿಳಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಾಯಕ ಪಾಟೀಲ್‌ ಬಸನಗೌಡ ಹುಣಸಗಿ ಉಪನ್ಯಾಸ ನೀಡಿದರು.

 ನಗರಸಭೆ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪುರ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಜಿಲ್ಲಾ ಮರಾಠ ಸಮಾಜ ಅಧ್ಯಕ್ಷ ನಗರ ಸಭೆಯ ಸದಸ್ಯ ಮರೆಪ್ಪ ಚಟ್ಟರಕರ್‌, ನಾರಾಯಣರಾವ್‌ ಚವ್ಹಾಣ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು. ಯುವ ಸಾಹಿತಿ ಅಮರಯ್ಯ ಸ್ವಾಮಿ ಜಾಲಿಬೆಂಚಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಚಂದ್ರಶೇಖರ ಗೋಗಿ ನಾಡಗೀತೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next