Advertisement
ಶಿವಗಂಗೆ ಬೆಟ್ಟ, ಬೆಂಗಳೂರು ನಗರದಿಂದ ಸುಮಾರು 54 ಕಿಮೀ. ದೂರದಲ್ಲಿರುವ ಪುಣ್ಯ ಕ್ಷೇತ್ರ. ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಇದೂ ಒಂದು. ವಿಜ್ಞಾನಕ್ಕೆ ಮತ್ತು ತಂತ್ರಜ್ಞಾನಕ್ಕೆ ಸವಾಲಾಗಿರುವ ಸಂಗತಿಗಳಲ್ಲಿ ಈ ಶಿವಗಂಗೆಯ ಲಿಂಗ ಮಹಾತೆ¾ಯೂ ಒಂದು. ಈ ಪುಣ್ಯ ಸ್ಥಳದಲ್ಲಿ ಇರುವ ಈಶ್ವರ ಲಿಂಗಕ್ಕೆ ತುಪ್ಪವನ್ನು ಹಚ್ಚಿದರೆ ಅದು ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ. ಬೆಣ್ಣೆಯನ್ನು ಒಲೆಯ ಮೇಲಿಟ್ಟು ಕಾಯಿಸಿ, ಕರಗಿಸಿದರೆ ಅದು ತುಪ್ಪವಾಗುತ್ತದೆ. ಆದರೆ ಒಮ್ಮೆ ತುಪ್ಪವಾದ ಬೆಣ್ಣೆಯನ್ನು ಪ್ರಿvj…ನಲ್ಲಿ ಇಟ್ಟರೂ ಅದು ಮತ್ತೆ ಬೆಣ್ಣೆಯಾಗುವುದು ಅಸಾಧ್ಯದ ಮಾತು. ಆದರೆ, ಈ ಶಿವಗಂಗೆಯಲ್ಲಿ ಈ ಪವಾಡವನ್ನು ಪ್ರತ್ಯಕ್ಷ$ ಕಾಣಬಹುದು. ಭಗವಂತನ ಕೃಪೆ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತು ಇದಕ್ಕೆ ಅನ್ವಯಿಸುತ್ತದೆ.
Related Articles
Advertisement
ಇನ್ನು ಈ ಬೆಟ್ಟದ ಮೇಲೆ ಒಂದು ಸಣ್ಣ ಸುರಂಗವಿದೆ. ಈ ಸುರಂಗದಲ್ಲಿ ಮುಂದುವರೆದರೆ ಶ್ರೀರಂಗಪಟ್ಟಣ ತಲುಪಬಹುದು ಎಂಬ ನಂಬಿಕೆ. ಬೆಟ್ಟದ ಮೇಲಿರುವ ಒಳಕಲ್ಲು ತೀರ್ಥದಲ್ಲಿ ವರ್ಷದ 365 ದಿನಗಳೂ ನೀರು ದೊರೆಯುತ್ತದೆ. ಕಡಿದಾದ ಬೆಟ್ಟವನ್ನು ಏರುತ್ತಾ ಹೋದರೆ ಒಂದು ಎತ್ತರವಾದ ಬಂಡೆಯ ಮೇಲೆ ನಂದಿ ವಿಗ್ರಹವಿದೆ. ಇದನ್ನು ಪ್ರದಕ್ಷಿಣೆ ಹಾಕುವುದೆ ಒಂದು ಸಾಹಸದ ಕೆಲಸ. ಕಾಲು ಇಡಲು ಕೂಡ ಜಾಗ ಚಿಕ್ಕದು ಹಾಗೂ ಮತ್ತೂಂದು ಕಡೆ ಆಳವಾದ ಪ್ರಪಾತ. ನಂತರ ಹಾಗೇ ಮುಂದುವರೆದರೆ ಬೆಟ್ಟದ ಮೇಲೆ ಗಂಗಾಧರೇಶ್ವರನ ಸುಂದರವಾದ ದೇವಾಲಯವಿದೆ. ಇಲ್ಲಿನ ಗರ್ಭಗುಡಿಯಲ್ಲಿ ಗಂಗಾಧರೇಶ್ವರ ಲಿಂಗರೂಪದಲ್ಲಿ ನೆಲೆಸಿ, ಬೇಡಿ ಬರುವ ಭಕ್ತರಿಗೆ ದರುಶನ ಭಾಗ್ಯ ಕರುಣಿಸುತ್ತಿದ್ದಾನೆ. ಈ ಬೆಟ್ಟದ ಮೇಲಿರುವ ಶ್ರೀಹೊನ್ನಾದೇವಿ ದೇವಸ್ಥಾನವೂ ಕೂಡ ಪ್ರಮುಖವಾದ ದೇವಸ್ಥಾನವಾಗಿದೆ. ಪ್ರತಿ ವರ್ಷ ಜನವರಿ ತಿಂಗಳಿನ ಸಂಕ್ರಾಂತಿ ಹಬ್ಬದ ದಿನ ಎರಡೂ ದೇವರುಗಳಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ.
ಆ ದಿನ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. ಅದೇ ಜಲವನ್ನು ವಾದ್ಯಗೋಷ್ಠಿಗಳ ಸಮೇತ ತಂದು ಪವಿತ್ರವಾದ ನೀರಿನಿಂದ ಶ್ರೀ ಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ. ಇನ್ನು ಇಲ್ಲಿ ಶಂಕರಾಚಾರ್ಯರ ಶಾಖಾ ಮಠ, ಶಾರದಾಂಬೆಯ ದೇವಸ್ಥಾನ, ಬೃಹದಾಕಾರವಾದ ತೋಪಿನ ಗಣೇಶ ಹಾಗೂ 108 ಲಿಂಗಗಳುಳ್ಳ ಅಗಸ್ತ್ಯ ದೇವಸ್ಥಾನಗಳಿವೆ. ಹತ್ತಿರದಲ್ಲಿಯೇ ಪಾತಾಳ ಗಂಗೆ ಇದ್ದು ಸದಾ ನೀರಿನಿಂದ ತುಂಬಿರುತ್ತದೆ. ವಿಚಿತ್ರವೆಂದರೆ ಇಲ್ಲಿ ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗಿರುತ್ತದೆ. ಬೇಸಿಗೆಯಲ್ಲಿ ನೀರು ಹೆಚ್ಚಾಗಿ ಮೇಲಕ್ಕೆ ಬರುತ್ತದೆ. ಇನ್ನು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಇದೇ ಬೆಟ್ಟದಲ್ಲೇ ನಾಟ್ಯರಾಣಿ ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಎಂಬ ಐತಿಹ್ಯವಿದೆ.
ತಲುಪುವ ಮಾರ್ಗ – ಬೆಂಗಳೂರು ನಗರದಿಂದ ಸುಮಾರು 54 ಕಿಮೀ ಹಾಗೂ ದಾಬಸ್ ಪೇಟೆಯಿಂದ ಸುಮಾರು 6 ಕಿ.ಮೀ ಹಾಗೂ ತುಮಕೂರಿನಿಂದ 20 ಕಿ.ಮೀ ಅಂತರದಲ್ಲಿರುವ ಈ ಬೆಟ್ಟಕ್ಕೆ ಸಾಕಷ್ಟು ಬಸ್ ಸೌಕರ್ಯಗಳಿವೆ.
ಆಶಾ ಎಸ್. ಕುಲಕರ್ಣಿ