Advertisement

Shiva Rajkumar: ಮೊದಲ ಭಾಗದ ಪ್ರಶ್ನೆಗಳಿಗೆ 2ನೇ ಭಾಗದಲ್ಲಿ ಉತ್ತರ!

05:39 PM Oct 23, 2023 | Team Udayavani |

ಶಿವರಾಜ್‌ಕುಮಾರ್‌ ನಟನೆಯ “ಘೋಸ್ಟ್‌’ ಚಿತ್ರಕ್ಕೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವಣ್ಣ ಹೊಸ ಗೆಟಪ್‌ನಲ್ಲಿ ಮಿಂಚುತ್ತಿದ್ದಾರೆ. ಇದರ ಪರಿಣಾಮವಾಗಿ ಚಿತ್ರದ ಶೋಗಳು ಕೂಡಾ ಹೆಚ್ಚಾಗುತ್ತಿದೆ.

Advertisement

ನಿಮಗೆ ಗೊತ್ತಿರುವಂತೆ “ಘೋಸ್ಟ್‌’ ಚಿತ್ರದ ಮುಂದುವರಿದ ಭಾಗ ಕೂಡಾ ಬರಲಿದೆ. ಈ ಭಾಗದಲ್ಲಿ ಮೊದಲ ಭಾಗದ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಲಿದೆಯಯಂತೆ. ಸಿನಿಮಾ ನೋಡಿದ ಅನೇಕರು ಚಿತ್ರದ ಲಾಜಿಕ್‌ ಕುರಿತಾಗಿ ಪ್ರಶ್ನಿಸಿದ್ದರು. ಅಂಡರ್‌ಪಾಸ್‌ನೊಳಗೆ ಕಾರು, ಬೈಕ್‌ಗಳು ಹೇಗೆ ಬಂದವು, ಬೋಟ್‌ ಅನ್ನು ಹೊರಗಡೆ ಆಪರೇಟ್‌ ಮಾಡುತ್ತಿದ್ದವರು ಯಾರು, ದಳವಾಯಿಯ ಹಿನ್ನೆಲೆ.. ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆಯಂತೆ. ಈ ಚಿತ್ರವನ್ನು ಶ್ರೀನಿ ನಿರ್ದೇಶನ ಮಾಡಿದ್ದು, ಸಂದೇಶ್‌ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಮಲಯಾಳಂ ನಟ ಜಯರಾಂ, ಅನುಪಮ್‌ ಖೇರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next