ಹೆಬ್ರಿ: ಇದು ನದಿಯ ಮಧ್ಯೆ ಇರುವ ಶಿವಲಿಂಗ. ವರ್ಷದ ಹೆಚ್ಚಿನ ದಿನಗಳಲ್ಲಿ ನೀರಿನಲ್ಲಿ ಮುಳುಗಿದಂತೆ ಇರುವ ಈ ಲಿಂಗಕ್ಕೆ ಪೂಜೆ ಆಗುವುದು ವರ್ಷಕ್ಕೆ ಎರಡು ಬಾರಿ ಮಾತ್ರ. ಹಾಗಾದರೆ ಅಂತಹ ಶಿವಲಿಂಗ ಎಲ್ಲಿದೆ? ಏನಿದರ ಕಾರಣಿಕ? ಇಲ್ಲಿದೆ ಉತ್ತರ.
ಈ ಶಿವಲಿಂಗ ಇರುವುದು ಹೆಬ್ರಿ ಸಮೀಪ ಮಠದಬೆಟ್ಟು ಸೀತಾನದಿ ಮಧ್ಯೆ. ನದಿ ಕಲ್ಲಿನಲಿ ಉದ್ಭವಿಸಿದ ಶಿವಲಿಂಗ ಜಂಗಮೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿ ಪ್ರಯುಕ್ತ ಇಂದು ಅರ್ಚಕ ನಾಗರಾಜ್ ಜೋಯಿಸ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ಮಳೆಗಾಲದಲ್ಲಿ ಶಿವಲಿಂಗ ನೀರಿನಲ್ಲಿ ಮುಳುಗಿ ಹೋಗುವ ಕಾರಣ ಜಂಗಮೇಶ್ವರ ಕ್ಷೇತ್ರದಲ್ಲಿ ಎಳ್ಳಮಾವಾಸ್ಯೆ ಮತ್ತು ಶಿವರಾತ್ರಿ ದಿನ ಮಾತ್ರ ಪೂಜೆ ನಡೆಯುತ್ತದೆ.
ಇದನ್ನೂ ಓದಿ:ಶಿವ ಸೃಷ್ಟಿ, ಸ್ಥಿತಿ, ಲಯಗಳ ಕಾರಣಿಕರ್ತ
ಸುಮಾರು ಇನ್ನೂರೈವತ್ತು ಹಿಂದೆ ಇಲ್ಲಿ ವಾಸವಾಗಿದ್ದ ಜಂಗಮರು ಈ ಲಿಂಗದ ಪೂಜೆ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಇದರ ಪೂಜೆ ನಡೆದಿರಲಿಲ್ಲ. ಸುಮಾರು ಏಳು ವರ್ಷಗಳ ಹಿಂದೆ ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದಂತೆ ಮತ್ತೆ ಪೂಜೆ ಆರಂಭವಾಗಿದೆ.
ಇದನ್ನೂ ಓದಿ: ರುದ್ರಾಕ್ಷಿ ರೂಪದ ಕೋಟಿ ಶಿವಲಿಂಗ; ಇದು ಪ್ರಸಿದ್ಧ ಕೋಟೇಶ್ವರದ ಕೋಟಿಲಿಂಗೇಶ್ವರ ಸನ್ನಿಧಿ
ಇಲ್ಲಿನ ಅರ್ಚಕ ನಾಗರಾಜ್ ಜೋಯಿಸ್ ನೇತೃತ್ವದಲ್ಲಿ ಕಳೆದ ಏಳು ವರ್ಷಗಳಿಂದ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರಾಕೃತಿಕ ಸೌಂದರ್ಯದ ಉಳಿಸಿಕೊಂಡು ನೀರಿನಲ್ಲಿ ನೆಲೆನಿಂತ ಶಿವಲಿಂಗ ವಿಶೇಷ ಶಕ್ತಿ ಸಾನಿಧ್ಯ ಹೊಂದಿದೆ.