Advertisement

ಭಾರತದಲ್ಲೂ ಬುರ್ಖಾ ನಿಷೇಧಕ್ಕೆ ಪ್ರಧಾನಿ ನಿರ್ಧಾರ ಕೈಗೊಳ್ಳಲಿ: ಶಿವಸೇನೆ

09:10 AM May 02, 2019 | Vishnu Das |

ಮುಂಬಯಿ: ಈಸ್ಟರ್‌ ಸಂಡೇ ದುರಂತದ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೂಪದ ಬುರ್ಖಾ ಧರಿಸುವುದಕ್ಕೆ ಶ್ರೀಲಂಕಾ ಸರಕಾರ ನಿಷೇಧ ಹೇರಿದಂತೆ ಭಾರತದಲ್ಲೂ ಕಾನೂನು ಜಾರಿಯಾಗಬೇಕು ಎಂದು ಶಿವಸೇನೆ ಆಗ್ರಹಿಸಿದೆ.

Advertisement

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಫ್ರಾನ್ಸ್‌ , ಶ್ರೀಲಂಕಾ ಸರಕಾರಗಳು ಭದ್ರತೆ ದೃಷ್ಟಿಯಿಂದ ಬುರ್ಖಾ ನಿಷೇಧಿಸಿರುವುದನ್ನು ಉಲ್ಲೇಖ ಮಾಡಿ ಭಾರತದಲ್ಲೂ ಇದು ಜಾರಿಯಾಗಬೇಕು ಎಂದು ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ ಉಗ್ರರ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಮಾದರಿಯಲ್ಲಿ ಬುರ್ಖಾ ನಿಷೇಧದ ಬಗ್ಗೆ ದೊಡ್ಡ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ ಎಂದು ಬರೆಯಲಾಗಿದೆ.

ಶ್ರೀಲಂಕಾದಲ್ಲಿ ಮುಖದ ಗುರುತನ್ನು ಮರೆಮಾಚುವ ಯಾವುದೇ ಬಟ್ಟೆಯನ್ನು ಧರಿಸುವುದೂ ನಿಷೇಧವಾಗಿದೆ. ದೇಶದ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next