Advertisement

ಏಕ ರಾಷ್ಟ್ರ -ಏಕ ಚುನಾವಣೆಗೆ ಶಿವಸೇನೆ ಭಿನ್ನರಾಗ

10:30 AM Jul 03, 2019 | Vishnu Das |

ಮುಂಬಯಿ: ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಭಾರತೀಯ ಜನತಾ ಪಕ್ಷದ ಪ್ರಸ್ತಾಪಕ್ಕೆ ಹಿನ್ನಡೆಯಾಗಿದೆ. ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಅದರ ಅನುಷ್ಠಾನದ ಬಗ್ಗೆ ಅನುಮಾನಗಳೊಂದಿಗೆ ಎಲೆಕ್ಟ್ರಾನಿಕ್‌ ಮತದಾನ ಯಂತ್ರಗಳ (ಇವಿಎಂ) ಬಳಕೆ ಮತ್ತು ಮತದಾರ-ಪರಿಶೀಲಿಸಬಹುದಾದ ಪೇಪರ್‌ ಆಡಿಟ್‌ ಟ್ರಯಲ್‌ (ವಿವಿಪಿಎಟಿ) ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Advertisement

ಸೇನಾ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್‌ ರಾವುತ್‌ ಅವರು ಈ ಯೋಜನೆಯನ್ನು ಅಸಾಧ್ಯ ಎಂದು ತಿಳಿಸಿದ್ದು, ಇದು ಪ್ರಾದೇಶಿಕ ಪಕ್ಷಗಳನ್ನು ಅನನುಕೂಲಕ್ಕೆ ತಳ್ಳುತ್ತದೆ ಎಂದು ಆಪಾದಿಸಿದ್ದಾರೆ. ಕಳೆದ ಜೂ. 19ರಂದು ಪ್ರಧಾನಿ ನರೇಂದ್ರ ಮೋದಿ ಅವರ ಏಕ ರಾಷ್ಟ್ರ-ಏಕ ಚುನಾವಣೆ ಯೋಜನೆಯ ಬಗ್ಗೆ ಒಮ್ಮತ ಮೂಡಿಸುವ ಪ್ರಯತ್ನದಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದರು. ಆದರೆ ಇದರಲ್ಲಿ ಸೇನಾ ಪ್ರತಿನಿಧಿಗಳು ಭಾಗವಹಿಸದಿರುವುದು ಕುತೂಹಲಕ್ಕೆಡೆಮಾಡಿತ್ತು.

ಪ್ರಧಾನಿಯವರ ಈ ಯೋಜನೆಯ ವಿಚಾರ ವಾಗಿ ಚರ್ಚಿಸಬೇಕು ಎಂದು ರಾವುತ್‌ ತಿಳಿಸಿ ದ್ದಾರೆ. ಬೃಹತ್‌ ದೇಶದಲ್ಲಿ ಸರಕಾರವನ್ನು ಒಂದು ಮತದಿಂದ ಕೆಳಗಿಳಿಸಲಾಗುತ್ತದೆ ಅಥವಾ ರಚಿಸಲಾಗುತ್ತದೆ. ಆಗ ಏಕ ರಾಷ್ಟ್ರ-ಏಕ ಚುನಾವಣೆ’ ಕಾರ್ಯಸಾಧ್ಯವಾಗಲಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಒಬ್ಬರು ಮೂರು ವರ್ಷಗಳ ಕಾಲ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವನ್ನು ಹೊಂದಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿವೆ. ಇದನ್ನು ಚರ್ಚಿಸಬೇಕಾಗಿದೆ. ಇದೀಗ ಅದು ಪ್ರಾಯೋಗಿಕವಾಗಿ ಅಸಮರ್ಥವಾಗಿದೆ ಎಂದು ರಾವುತ್‌ ತಿಳಿಸಿದ್ದಾರೆ.

ಏಕಕಾಲಿಕ ಮತದಾನ ವ್ಯವಸ್ಥೆಯು ರಾಷ್ಟ್ರೀಯ ಪಕ್ಷಗಳಿಗೆ ಪ್ರಯೋಜನವನ್ನು ನೀಡುತ್ತದೆ, ಆದರೆ ಶಿವಸೇನೆಯಂತಹ ಪ್ರಾದೇಶಿಕ ಪಕ್ಷಗಳು ತೊಂದರೆ ಅನುಭವಿಸುತ್ತವೆ ಮತ್ತು ರಾಜ್ಯದ ಸಮಸ್ಯೆಗಳು ದುರ್ಬಲಗೊಳ್ಳುತ್ತವೆ ಎಂದು ಶಿವಸೇನೆಯ ನಾಯಕರು ತಿಳಿಸಿದ್ದಾರೆ. ಲೋಕಸಭೆಯಲ್ಲಿ ಸೇನೆಯ ಗುಂಪಿನ ಮುಖಂಡ ವಿನಾಯಕ ರಾವುತ್‌ ಅವರು, ಈ ಯೋಜನೆಯ ಬಗ್ಗೆ ಕೇಂದ್ರ ಸರಕಾರಕ್ಕೆ ಪಕ್ಷದ ಅಂತಿಮ ಅಭಿಪ್ರಾಯವನ್ನು ಇನ್ನೂ ಸಲ್ಲಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಚುನಾವಣೆಗಳು ಏಕಕಾಲದಲ್ಲಿ ನಡೆದಾಗ, ರಾಷ್ಟ್ರೀಯ ವಿಷಯಗಳ ಮೇಲೆ ಚುನಾವಣೆಗಳು ನಡೆಯುತ್ತವೆ. ಅಂತಹ ಸಂದರ್ಭದಲ್ಲಿ, ಪ್ರಾದೇಶಿಕ ಪಕ್ಷಗಳು ದುರ್ಬಲವಾಗುತ್ತವೆ. ನಾವು ಎಲ್ಲಾ ಸಮಸ್ಯೆಗಳು ಮತ್ತು ಕಳವಳಗಳನ್ನು ಸಮಿತಿಯ ಮುಂದೆ ಇಡಲಿದ್ದೇವೆ ಎಂದು ಸೇನಾ ಮುಖಂಡ ಸಂಜಯ್‌ ರಾವುತ್‌ ತಿಳಿಸಿದ್ದಾರೆ. ಏಕಕಾಲದಲ್ಲಿ ಮತದಾನ ಜಾರಿಗೆ ಬರಬೇಕಾದರೆ ಇವಿಎಂ ಮತ್ತು ವಿವಿಪಿಎಟಿಗಳು ನ್ಯಾಯ ಸಮ್ಮತವಾಗಿರಬೇಕು. ಇವಿಎಂಗಳು ಮತ್ತು ವಿವಿಪಿಎಟಿಗಳಲ್ಲಿ ಬಹಳಷ್ಟು ಪ್ರಶ್ನೆಗಳಿವೆ. ಆದ್ದರಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮತ್ತು ಸುಧಾರಣೆಯನ್ನು ಮಾಡುವುದು ನಮ್ಮ ಬೇಡಿಕೆಯಾಗಿದೆ.

Advertisement

ಹಿಂದಿನ ಚುನಾವಣೆಗಳಲ್ಲಿ, ಶೇ. 100 ರಷ್ಟು ಮತದಾನ ಇವಿಎಂ ಮತ್ತು ವಿವಿಪಿಎಟಿಗಳಲ್ಲಿ ನಡೆದಿತ್ತು. ಆದರೆ ವಿವಿಪಿಎಟಿಗಳೊಂದಿಗೂ ಜನರು ಅನುಮಾನಗಳನ್ನು ಹುಟ್ಟುಹಾಕುತ್ತಿದ್ದಾ ರೆ. ಚುನಾವಣೆಗೆ ಬ್ಯಾಲೆಟ್‌ ಪೇಪರ್‌ ಬಳಸುವುದ ರಿಂದ ಯಾವುದೇ ಹಾನಿ ಇಲ್ಲ. ಮತ ಪತ್ರವು ಅತ್ಯುತ್ತಮ ಮತದಾನ ವ್ಯವಸ್ಥೆಯಾಗಿದ್ದು, ಮತದಾರರು ತಾವು ಯಾರಿಗೆ ಮತ ಹಾಕಿದ್ದೇವೆ ಎಂಬ ಭರವಸೆಯನ್ನು ಹೊಂದಿರುತ್ತಾರೆ ಎಂದು ರಾವುತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next