Advertisement

5 ಬಾರಿ ಸಂಸದರಾಗಿದ್ದ ಮೋಹನ್‌ ರವಾಲೆ ಹೃದಯಾಘಾತದಿಂದ ನಿಧನ

12:02 PM Dec 20, 2020 | sudhir |

ಮುಂಯಿ: ಶಿವಸೇನೆಯ ಹಿರಿಯ ಮುಖಂಡ, ಐದು ಬಾರಿ ಸಂಸದರಾಗಿದ್ದ ಮೋಹನ್‌ ರವಾಲೆ (72) ತೀವ್ರ ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು.

Advertisement

ರವಾಲೆ ಅವರು ದಕ್ಷಿಣ ಮುಂಬಯಿಯ ಲೋಕಸಭಾ ಕ್ಷೇತ್ರವನ್ನು 1991ರಿಂದ 2009ರ ವರೆಗೆ ಪ್ರತಿನಿಧಿಸಿದ್ದರು. 2013ರಲ್ಲಿ ಠಾಕ್ರೆ ಕುಟುಂಬದ ಜತೆಗಿನ ಭಿನ್ನಾಭಿಪ್ರಾಯದ ಕಾರಣ ಇವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆ ಬಳಿಕ ರವಾಲೆ ಮತ್ತೆ ಶಿವಸೇನೆ ಸೇರಿದ್ದರು.

ರವಾಲೆ ನಿಧಾನಕ್ಕೆ ಶಿವಸೇನೆ ಮುಖಂಡ ಸಂಜಯ್‌ ರಾವತ್‌ ಟ್ವೀಟ್‌ನಲ್ಲಿ ಸಂತಾಪ ಸೂಚಿಸಿದ್ದು ಮೋಹನ್‌ ರವಾಲೆ ವಿಶ್ವಾಸಾರ್ಹ ಶಿವಸೈನಿಕ. ದೊಡ್ಡ ಹೃದಯದ ಗೆಳೆಯ. ಅವರಿಗೆ ನನ್ನ ನಮನಗಳು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next