Advertisement

ಗುವಾಹಟಿ: ಮನವೊಲಿಸಲು ತೆರಳಿದ್ದ ಶಿವಸೇನೆ ನಾಯಕ ಪೊಲೀಸ್ ವಶಕ್ಕೆ

02:51 PM Jun 24, 2022 | Team Udayavani |

ಗುವಾಹಟಿ : ಶಿವಸೇನೆಯ ಬಂಡಾಯ ಶಾಸಕರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪಾಳಯಕ್ಕೆ ಮರಳಲು ಮನವಿ ಮಾಡಲು ಗುವಾಹಟಿಗೆ ತೆರಳಿದ್ದ ಶಿವಸೇನೆ ನಾಯಕ ಸಂಜಯ್ ಭೋಸಲೆ ಅವರನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶುಕ್ರವಾರ ನಡೆದಿದೆ.

Advertisement

ಅಸ್ಸಾಂ ಪೊಲೀಸರು ಹೋಟೆಲ್‌ನ ಹೊರಗೆ ವಶಕ್ಕೆ ಪಡೆದಿದ್ದು, ಸಂಜಯ್ ಅವರು ತನಗೆ ಹೊಟೇಲ್ ಒಳಗೆ ಬರಲು ಬಿಡದಿದ್ದಕ್ಕೆ ಗೇಟಿನ ಹೊರಗೆ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ನಂತರ ಅವರನ್ನು ಬಂಧಿಸಲಾಯಿತು.

ಇದನ್ನೂ ಓದಿ : ಉದ್ಧವ್ ಠಾಕ್ರೆಯೂ ಅಸ್ಸಾಂ ಪ್ರವಾಸಕ್ಕೆ ಬರಲಿ : ಸಿಎಂ ಶರ್ಮಾ ಲೇವಡಿ

ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರು ಗುವಾಹಟಿಯಲ್ಲಿ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಅವರ ಅನುಯಾಯಿಗಳ ‘ಕಾಳಜಿ’ ವಹಿಸಿಕೊಂಡಿದ್ದಾರೆ, ಅವರ ಆದೇಶದ ಮೇರೆಗೆ ಪೊಲೀಸರು ಬಂಡಾಯ ಶಾಸಕರನ್ನು ಹೋಟೆಲ್ ನ ಒಳಗೆ ಬಂಧನದಲ್ಲಿಟ್ಟಿದ್ದಾರೆ ಎಂದು ಉದ್ಧವ್ ಬೆಂಬಲಿಗರು ಆರೋಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next