Advertisement

ಗವರ್ನರ್, ಸ್ಪೀಕರ್, ಕುಮಾರಸ್ವಾಮಿ “ಗೇಮ್” ಆಡುತ್ತಿದ್ದಾರೆ; ಸಾಮ್ನಾದಲ್ಲಿ ಶಿವಸೇನಾ

09:05 AM Jul 23, 2019 | Team Udayavani |

ಮುಂಬೈ:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮೈತ್ರಿ ಪಕ್ಷವಾದ ಶಿವಸೇನಾ, ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕ ಸೋಮವಾರ ಕೊನೆಗೊಳ್ಳಲಿದೆ ಎಂದು ಹೇಳಿದೆ.

Advertisement

ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಪ್ರಕಟಗೊಂಡಿರುವ ಸಂಪಾದಕೀಯದಲ್ಲಿ, ವಿಧಾನಸಭೆಯೊಳಗೆ ಬಹುಮತ ಇರುವುದು ಅಗತ್ಯ. ಆದರೆ ಕುಮಾರಸ್ವಾಮಿ ಈಗಾಗಲೇ ಬಹುಮತ ಕಳೆದುಕೊಂಡಿದ್ದಾರೆ. ಚರ್ಚೆ ನಡೆಸುವ ಮೂಲಕ ವಿಧಾನಸಭೆಯಲ್ಲಿ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ ಎಂದು ದೂರಿದೆ.

ವಿಶ್ವಾಸಮತ ಯಾಚನೆ ನಡೆಸಲು ಅನುವು ಮಾಡಿಕೊಡಲು ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಒತ್ತಾಯಿಸಬೇಕೆಂದು ಶಿವಸೇನಾ ಸಲಹೆ ನೀಡಿದೆ, ಆದರೆ ಅದು ಅವರಿಗೆ ಬೇಕಾಗಿಲ್ಲ ಯಾಕೆಂದರೆ ಅಧಿಕಾರದಲ್ಲಿ ಮುಂದುವರಿಯಬೇಕೆಂಬ ಇಚ್ಛೆ ಹೊಂದಿದ್ದಾರೆ ಎಂದು ಟೀಕಿಸಿದೆ.

ಕರ್ನಾಟಕ ಗವರ್ನರ್ ವಜೂಭಾಯ್ ವಾಲಾ, ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕುಮಾರಸ್ವಾಮಿ ತಮ್ಮ, ತಮ್ಮ ಚಾಣಕ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಕರ್ನಾಟಕ ರಾಜಕೀಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಕೂಡಾ ಮಧ್ಯಪ್ರವೇಶಿಸಿದೆ ಎಂದು ಸಂಪಾದಕೀಯದಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next