ಮಹಾರಾಷ್ಟ್ರದ ಒಸ್ಮಾನಾಬಾದ್ ಲೋಕಸಭಾ ಕ್ಷೇತ್ರ ಅಂಥ ಸೂಕ್ಷ್ಮ ಲೋಕಸಭಾ ಕ್ಷೇತ್ರವೇನೂ ಅಲ್ಲ. ಹಾಲಿ ಸಂಸದ ಶಿವಸೇನೆಯ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿಯಿಂದ ಹೊಡೆದ ಬಳಿಕ ಹೆಚ್ಚಿನ ಚರ್ಚೆಗೆ ಗ್ರಾಸವಾ ಗಿದ್ದರು. ಈ ಪ್ರಕರಣ ದ ಬಳಿಕ ವಿಮಾನ ದಲ್ಲಿ ಅನುಚಿತವಾಗಿ ವರ್ತಿಸು ವವರನ್ನು “ನೋ ಪ್ಲೆ„ಯಿಂಗ್ ಲಿಸ್ಟ್’ (ವಿಮಾನ ಪ್ರಯಾಣ ಮಾಡುವವರ ಮೇಲೆ ಹೇರಲಾಗುವ ನಿಷೇಧ)ಗೆ ಸೇರ್ಪಡೆಗೊಂಡ ಮೊದಲ ಸಂಸದ ಎಂಬ ಕುಖ್ಯಾತಿಗೆ ಪಾತ್ರರಾದರು. ಈ ಘಟನೆಯ ಬಳಿಕ ಶಿವಸೇನೆ ತನ್ನ ಸಂಸದನನ್ನು ಸಮರ್ಥಿಸಿ ಕೊಂಡರೂ, ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದೆ.
ಆದರೆ, ಅವರನ್ನು ಬೆಂಬಲಿಸುವ ಶಿವಸೇನೆಯ ಸ್ಥಳೀಯ ಘಟಕ ಪಕ್ಷದ ನಿರ್ಧಾರಕ್ಕೆ ಆಕ್ಷೇಪ ಮಾಡಿದ್ದರೂ, ಫಲ ನೀಡಿಲ್ಲ. ಗಾಯಕ್ವಾಡ್ ಸ್ಥಾನಕ್ಕೆ ಪಕ್ಷದ ನಾಯಕ ಓಮ್‌ರಾಜೆ ನಿಬಾಳ್ಕರ್ ಅವರನ್ನು ಕಣಕ್ಕೆ ಇಳಿಸಿದೆ. ಎನ್‌ಸಿಪಿಯಿಂದ ಶಾಸಕ ರಣ ಜಗಜಿತ್ ಸಿಂಗ್ ಪಾಟೀಲ್ ಸ್ಪರ್ಧೆಗೆ ಇಳಿದಿದ್ದಾರೆ.
ಶಿವಸೇನೆಯಲ್ಲಿನ ಭಿನ್ನಮತ ಎನ್‌ಸಿಪಿಗೆ ವರದಾನವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿನ 6ರ ಪೈಕಿ 3ರಲ್ಲಿ ಎನ್‌ಪಿಸಿ, 2ರಲ್ಲಿ ಕಾಂಗ್ರೆಸ್, 1ರಲ್ಲಿ ಶಿವಸೇನೆಯ ಶಾಸಕರು ಇದ್ದಾರೆ. ರಾಣ ಜಗಜಿತ್ ಸಿಂಗ್ ಪಾಟೀಲ್ ಮತ್ತು ಓಮ್‌ರಾಜೆ ನಿಂಬಾಳ್ಕರ್‌ರ ಕುಟುಂಬ ರಾಜಕೀಯವಾಗಿ ಹಿನ್ನೆಲೆ ಇರುವವರು. ಸಮುದಾಯವಾರು ನೋಡಿದರೆ ಹಿಂದೂಗಳ ಪ್ರಮಾಣ ಶೇ.61, ಮುಸ್ಲಿಮರು ಶೇ.24, ಬೌದ್ಧರು ಶೇ.10.6, ಜೈನರು ಶೇ.3.7 ಮಂದಿ ಇದ್ದಾರೆ. ಮರಾಠವಾಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಈ ಕ್ಷೇತ್ರಕ್ಕೆ 2011-12ನೇ ಸಾಲಿನಿಂದ 2014-15ನೇ ಸಾಲಿನ ವರೆಗೆ ಬರ ಕಾಡಿತ್ತು. ಈ ವರ್ಷ ಕೂಡ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳನ್ನು ಬರಪೀಡಿತ ಎಂದು ಪರಿಗಣಿಸಲಾಗಿದೆ.
2014ರ ಫಲಿತಾಂಶ
– ರವೀಂದ್ರ ಗಾಯಕ್ವಾಡ್ (ಶಿವಸೇನೆ) – 6,07, 699
– ಪದಂ ಸಿನ್ಹಾ ಪಾಟೀಲ್ (ಎನ್‌ಸಿಪಿ) – 3,73, 374