Advertisement

ಗುರು ಪಾದೋದಕ ಇಲ್ಲದೇ ಶಿವಲಿಂಗ ಪೂಜೆಗೆ ಅರ್ಹವಲ್ಲ: ದಿಗ್ಗಾಂವ ಸ್ವಾಮೀಜಿ

11:53 PM Sep 11, 2024 | Team Udayavani |

ಚಿತ್ತಾಪುರ: ಶಿವಲಿಂಗದ ಮೇಲೆ ಪಾದಗಳನ್ನು ಇರಿಸಿ ಪೂಜೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದು, ಗುರುಗಳ ಪಾದೋದಕವಿಲ್ಲದೇ ಸ್ಥಾಪಿಸಲ್ಪಟ್ಟ ಲಿಂಗವು ಪೂಜಾರ್ಹವಲ್ಲವೆಂದು ವೀರಶೈವ ನವರತ್ನ ಮತ್ತು ವೀರಶೈವ ದಶರತ್ನ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಕಲಕಂಬ ಗ್ರಾಮದ ಈಶ ಬಸವೇಶ್ವರ ದೇವಾಲಯದ ಶಿವಲಿಂಗ ನೆಲದಲ್ಲಿ ಹುದುಗಿ ಹೋಗಿತ್ತು. ಹೊಸದಾಗಿ ಲಿಂಗ ಸ್ಥಾಪಿಸಿ ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡಬೇಕಾದರೆ ಹಲವು ಕ್ರಿಯೆಗಳು ನಡೆಯಬೇಕು. ಗುರುಗಳ ಪಾದೋದಕ ಇಲ್ಲದೇ ಶಿವಲಿಂಗ ಸ್ಥಾಪಿಸಲು, ಪೂಜೆ ಮಾಡಲು ಯೋಗ್ಯವೆನಿಸುವುದಿಲ್ಲ. ಧರ್ಮಗ್ರಂಥಗಳ ಆಧಾರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಪಾದೋದಕ ಮಾಡಲಾಗಿದೆ. ಆದರೆ ಇದನ್ನೇ ಯಾರೋ ಕಿಡಿಗೇಡಿಗಳು ವೀಡಿಯೋ ಮಾಡಿ ವೈರಲ್‌ ಮಾಡಿದ್ದಾರೆ. ನನ್ನಿಂದ ಯಾವುದೇ ತಪ್ಪು ನಡೆದಿದ್ದಲ್ಲ; ಧರ್ಮಗ್ರಂಥಗಳ ಪ್ರಕಾರವೇ ಮಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next