Advertisement

ಶಿಶಿಲ: ಕಪಿಲಾ ನದಿ ಸ್ವಚ್ಛತಾ ಅಭಿಯಾನ

11:42 PM May 18, 2020 | Sriram |

ಬೆಳ್ತಂಗಡಿ: ಶಿಶಿಲೇಶ್ವರ ದೇವರ ಸನ್ನಿಧಾನದಲ್ಲಿ ಹರಿಯುವ ಜೀವನದಿ ಕಪಿಲೆಯಲ್ಲಿ ಕಳೆದ ವರ್ಷ ಪ್ರವಾಹ ಎರಗಿದ್ದರಿಂದ ಕಿಂಡಿ ಅಣೆಕಟ್ಟು ಸಹಿತ ನದಿ ಪಾತ್ರದಲ್ಲಿ ತುಂಬಿದ್ದ ಮರಗಳು ಹಾಗೂ ತ್ಯಾಜ್ಯವನ್ನು ಅರಣ್ಯ ಇಲಾಖೆ ಸಹಯೋಗದೊಂದಿಗೆ ಶಿಶಿಲೇಶ್ವರ ಭಕ್ತ ವೃಂದ, ಯುವಕ ಮಂಡಲದ ಸಹಾಯದಿಂದ ಸುಮಾರು 80 ಮಂದಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರು.

Advertisement

ಶಿಶಿಲೇಶ್ವರನ ಸನ್ನಿಧಿಯ ಸಮೀಪದ ಕಿಂಡಿ ಅಣೆಕಟ್ಟಿನಲ್ಲಿ ಮರದ ದಿಮ್ಮಿಗಳು ಸೇರಿವೆ. ಮಳೆಗಾಲಕ್ಕೆ ಮುನ್ನ ತೆರವುಗೊಳಿಸದೇ ಹೋದಲ್ಲಿ ಮತ್ತಷ್ಟು ಸಮಸ್ಯೆಯಾಗಬಹುದೆಂದು ಮನಗಂಡು ಗ್ರಾಮಸ್ಥರು ಜತೆ ಸೇರಿ ಚಿಕ್ಕಮಗಳೂರು ಅರಣ್ಯ ಪ್ರದೇಶದ ಗಡಿ ಭಾಗದಲ್ಲಿರುವ ಹೊಳೆಗಂಡಿ ಎಂಬಲ್ಲಿಂದ ಪ್ರಾರಂಭಿಸಿ ಶಿಶಿಲ ದೇವಸ್ಥಾನದವರೆಗೆ 8 ಕಿ.ಮೀ. ದೂರ ನದಿ ಸ್ವಚ್ಛಗೊಳಿಸಲಾಯಿತು.

100ಕ್ಕೂ ಹೆಚ್ಚು ಮರ ತೆರವುಗೊಳಿಸುವ ಜತೆಗೆ, 10 ಚೀಲಗಳಷ್ಟು ಮದ್ಯದ ಬಾಟಲಿ, ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ ಕಪಿಲಾ ನದಿ ಸ್ವಚ್ಛತಾ ಅಭಿಯಾನ ಯಶಸ್ವಿಗೊಳಿಸಿದ್ದಾರೆ.ಅರಣ್ಯಾಧಿಕಾರಿ ಪ್ರಶಾಂತ್‌, ಅರಣ್ಯ ರಕ್ಷಕರಾದ ನಾಗಲಿಂಗ, ಸುನಿಲ್‌, ನಾಗಪ್ಪ ಸಹಕರಿಸಿದರು. ಸ್ವಚ್ಛತಾ ಕಾರ್ಯ ನಡೆಸಿದವರಿಗೆ ಶಿಶಿಲ ಪಂಚಾಯತ್‌ ವತಿಯಿಂದ ಮಾಸ್ಕ್ ಪೂರೈಸಲಾಗಿತ್ತು.

ಶಾಸಕರಿಂದ ಪರಿಶೀಲನೆ
ಸ್ವಚ್ಛತಾ ಕಾರ್ಯ ಮಾಹಿತಿ ತಿಳಿದು ಶಾಸಕ ಹರೀಶ್‌ ಪೂಂಜ ಸ್ಥಳಕ್ಕಾಗಮಿಸಿ ಗ್ರಾಮಸ್ಥರನ್ನು ಅಭಿನಂದಿಸಿ ಶಿಶಿಲೇಶ್ವರ ದೇವಸ್ಥಾನದ ಸಮೀಪದ ಕಿಂಡಿ ಅಣೆಕಟ್ಟಿನ ಸ್ಥಳ ಪರಿಶೀಲಿಸಿ ಮಳೆಗಾಲದ ಮುನ್ನ ಕಸಕಡ್ಡಿ ತೆರವಿಗೆ ಹಿಟಾಚಿ ನಿಯೋಜಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next