ಶಿರ್ವ: ವಿಪರೀತ ಕುಡಿತದ ಚಟ ಹೊಂದಿರುವ ಶಿರ್ವ ಪೆಜತ್ತಕಟ್ಟೆ ರಾಬಿನ್ ಬಸ್ ನಿಲ್ದಾಣದ ಬಳಿಯ ಬಾಡಿಗೆ ಮನೆ ನಿವಾಸಿ ಕೃಷ್ಣ ನಾಯಕ್(48) ಮೇ. 31 ರಂದು ಬೆಳಿಗ್ಗೆ 8 ಗಂಟೆಗೆ ತಲೆ ನೋವಿಗೆ ಮಾತ್ರೆ ತರುತ್ತೇನೆಂದು ತನ್ನ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ.
ಪತ್ನಿ ಜಯಶ್ರೀ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣ
Related Articles
ಶಿರ್ವ: ಇಲ್ಲಿನ ಪದವು ಮುಖ್ಯರಸ್ತೆ ಬಳಿಯ ನಿವಾಸಿ ಸೈಯದ್ ಜುನೇದ್ (29) ಜೂ. 2 ರಂದು ರಾತ್ರಿ 8 ಗಂಟೆಗೆ ಶಿರ್ವ ಪದವು ಎಂಬಲ್ಲಿಂದ ಎಲ್ಲಿಗೆ ಹೋಗುತ್ತೇನೆಂದು ತಿಳಿಸದೆ ಮನೆಯಿಂದ ಹೋದವರು ವಾಪಾಸು ಬಾರದೆ ಕಾಣೆಯಾಗಿದ್ದಾರೆ.
ಈತನ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. ಈತ ಮದುವೆಯಾಗುವ ಹುಡುಗಿ ಐಮಾನ್ ಕೂಡಾ ಮೈಸೂರಿನಿಂದ ಕಾಣೆಯಾಗಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ.
ಈತನ ತಂದೆ ಸೈಯದ್ ಅಪ್ಸರ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.