ಶಿರ್ವ: ಇಲ್ಲಿನ ಆರೋಗ್ಯ ಮಾತಾ ದೇವಾಲಯದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ರೆ|ಫಾ|ಡಾ|ಲೆಸ್ಲಿ ಡಿಸೋಜಾ ಅವರ ನೇತೃತ್ವದಲ್ಲಿ ಭಕ್ತರು ಏಸುವಿನ ಕಷ್ಟ ಮರಣದ 14 ಹಂತಗಳ ಶಿಲುಬೆಯ ಹಾದಿಯನ್ನು ಚರ್ಚ್‌ನ ವಠಾರದಲ್ಲಿ ನೆರವೇರಿಸಿ ಪ್ರಾಥìನೆ ನಡೆಸಿದರು.
ಶುಭ ಶುಕ್ರವಾರದಂದು ಕ್ರೈಸ್ತ ಬಾಂಧವರು ಏಸುವಿನ ಕಷ್ಟಗಳು ಹಾಗೂ ಶಿಲುಬೆಯಲ್ಲಿನ ಆತನ ಮರಣವನ್ನು ನೆನಪಿಸಿಕೊಂಡು ಧ್ಯಾನ ಹಾಗೂ ಉಪವಾಸವನ್ನು ಆಚರಿಸುತ್ತಾರೆ. ಈ ದಿನದಂದು ಮಾತ್ರ ಕೆಥೋಲಿಕ್ ಚರ್ಚುಗಳಲ್ಲಿ ಬಲಿಪೂಜೆಯನ್ನು ನೆರವೇರಿಸುವುದಿಲ್ಲ. ಚರ್ಚಿನಲ್ಲಿ ಅಲಂಕಾರ, ಮೊಂಬತ್ತಿ, ಘಂಟೆಗಳ ನಾದಗಳಿರುವುದಿಲ್ಲ.
ಚರ್ಚಿನ ಸಹಾಯಕ ಧರ್ಮಗುರುಗಳಾದ ರೆ|ಫಾ|ನೆಲ್ಸನ್ ಪೆರಿಸ್, ರೆ|ಫಾ| ಅಶ್ವಿನ್ ಅರಾನ್ಹಾ,ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಆರಾನ್ಹಾ,ಕಾರ್ಯದರ್ಶಿ ಪ್ಲೇವಿಯಾ ಡಿಸೋಜಾ,20 ಆಯೋಗದ ಸಂಚಾಲಕಿ ಲೀನಾ ಮಚಾದೋ,ಪಾಲನ ಮಂಡಳಿಯ ಸದಸ್ಯರು,ಆರ್ಥಿಕ ಮಂಡಳಿಯ ಸದಸ್ಯರು,ವಾಡೆಗಳ ಗುರಿಕಾರರು, ಭಕ್ತರು ಉಪಸ್ಥಿತರಿದ್ದರು.