ಶಿರ್ವ: ಬೆಳ್ಳೆ ಮತ್ತು ಶಿರ್ವ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು 50ಕ್ಕಿಂತ ಕಡಿಮೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಪರಿಷ್ಕೃತ ಆದೇಶದಂತೆ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿದ್ದು ಉಭಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಗುರುವಾರ ವ್ಯಾಪಾರ, ವ್ಯವಹಾರ ಸಂಪೂರ್ಣ ಬಂದ್ ಆಗಿತ್ತು.
ಮೆಡಿಕಲ್, ಆಸ್ಪತ್ರೆ, ಪೆಟ್ರೋಲ್ ಪಂಪ್ ಹೊರತುಪಡಿಸಿ ಬ್ಯಾಂಕ್, ಪಡಿತರ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ವ್ಯಾಪಾರ ವಹಿವಾಟುಗಳು ಇರಲಿಲ್ಲ .ನಿಗದಿತ ವೇಳೆಯಲ್ಲಿ ಹಾಲು ವಿತರಣೆ ಮತ್ತು ಹಾಲು ಡೈರಿಗೆ ಹಾಕುವುದು ಹಾಗೂ ಮಲ್ಲಿಗೆ, ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು.
ಶಿರ್ವದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಮತ್ತು ಶಿರ್ವ ಗ್ರಾ.ಪಂ.ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಕೆ.ಆರ್. ಪಾಟ್ಕರ್, ಪಿಡಿಒ ಅನಂತಪದ್ಮನಾಭ ನಾಯಕ್, ಗ್ರಾಮ ಕರಣಿಕ ವಿಜಯ್ ನೇತೃತ್ವದಲ್ಲಿ ಬ್ಯಾರಿಕೇಡ್ ಅಳವಡಿಸಿ ಬಿಗು ತಪಾಸಣೆ ನಡೆಸಿದ್ದು, ಕೆಲವು ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ವಾಪಾಸು ಕಳುಹಿಸಿದ್ದರು .ಕೊರೊನಾ ನಿಯಮ ಉಲ್ಲಂಘಿಸಿದ ವಾಹನಗಳು ಮತ್ತು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗಿದೆ.