Advertisement

Shirva: ಅಪರಿಚಿತ ವಾಹನ ಢಿಕ್ಕಿ; ಪಾದಚಾರಿ ಸಾವು

12:05 AM Dec 15, 2023 | Team Udayavani |

ಶಿರ್ವ: ಶಿರ್ವ-ಬೆಳ್ಮಣ್‌ ಮುಖ್ಯರಸ್ತೆಯ ಹೊಂಡಾ ಶೋರೂಂ ಬಳಿ ಶಿರ್ವ ಚರ್ಚಿನಲ್ಲಿ ಕಾರ್ಯಕ್ರಮ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಐವನ್‌ ಕೋರ್ಡಾ (55) ಅವರಿಗೆ ಬುಧವಾರ ಮಧ್ಯರಾತ್ರಿ 12-30ರ ಸುಮಾರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ.

Advertisement

ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಪರಿಚಯದ ಲ್ಯಾನ್ಸಿ 108 ಆ್ಯಂಬುಲೆನ್ಸ್‌ನಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಮುಂಜಾನೆ 2.20ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next