Advertisement

Shirva ಸಂತ ಮೇರಿ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ; ಸಮ್ಮಾನ

11:40 AM Dec 15, 2024 | Team Udayavani |

ಶಿರ್ವ: ಕೆಥೋಲಿಕ್‌ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ಬೋಧನೆಯ ಜತೆಗೆ ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿ ಬರುವಂತೆ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶಿಸ್ತಿಗೆ ಆದ್ಯತೆ ನೀಡಿ ಉತ್ತಮ ಮೌಲ್ಯಗಳನ್ನು ಅನುಸರಿಸಿಕೊಂಡು ಭವ್ಯ ಭಾರತದ ಉತ್ತಮ ನಾಗರಿಕರಾಗಿ ರೂಪುಗೊಳ್ಳಿ ಎಂದು ಉಡುಪಿ ಕೆಥೋಲಿಕ್‌ ಧರ್ಮಪ್ರಾಂತ್ಯದ ವಿಗಾರ್‌ ಜನರಲ್‌ ಮೊ|ರೆ|ಫಾ| ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಹೇಳಿದರು.

Advertisement

ಅವರು ಡಿ. 14 ರಂದು ಶಿರ್ವ ಸಂತ ಮೇರಿ ಪ.ಪೂ. ಕಾಲೇಜಿನ ಮೊನ್ಸಿಂಜೊರ್‌ ಹಿಲರಿ ಗೊನ್ಸಾಲ್ವಿಸ್‌ ರಂಗ ಮಂಟಪದಲ್ಲಿ ಶಿರ್ವ ಸಂತ ಮೇರಿ ಪ.ಪೂ. ಕಾಲೇಜು,ಸಂತ ಮೇರಿ ಪ್ರೌಢಶಾಲೆ ಮತ್ತು ಡೊನ್‌ ಬೊಸ್ಕೊ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ಕಾಲೇಜಿನ ಹಳೆವಿದ್ಯಾರ್ಥಿ,ನಿವೃತ್ತ ಐಎಎಸ್‌ ಅಧಿಕಾರಿ ಡಾ|ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆಯೊಂದಿಗೆ ಸಾಧನೆ ಮಾಡುವ ಕನಸು ಕಂಡು ಮಹತ್ವಾಕಾಂಕ್ಷೆ ಮತ್ತು ಛಲದೊಂದಿಗೆ ಮುಂದುವರಿದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು. ಡಾ|ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ ಅವರನ್ನು ಶಿಕ್ಷಣ ಸಂಸ್ಥೆಗಳ ವತಿಯಿಂದ ಸಮ್ಮಾನಿಸಲಾಯಿತು. ಜೇಮ್ಸ್‌ ಅತಿಥಿ ಪರಿಚಯ ಮಾಡಿದರು.

ಕಾಲೇಜಿನ ಸಂಚಾಲಕ /ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರೆ|ಫಾ|ಡಾ|ಲೆಸ್ಲಿ ಕ್ಲಿಫರ್ಡ್‌ ಡಿಸೋಜಾ ಮಾತನಾಡಿದರು. ಮುದರಂಗಡಿ ಸಂತ ಫ್ರಾನ್ಸಿಸ್‌ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರೆ|ಫಾ| ಫೆಡ್ರಿಕ್‌ ಡಿಸೋಜಾ, ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ನೋರ್ಬರ್ಟ್‌ ಮಚಾದೊ, ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್‌ ಆರಾನ್ಹ ವೇದಿಕೆಯಲ್ಲಿದ್ದರು.

ಕಾಲೇಜಿನ ಪ್ರಾಂಶುಪಾಲ ಜಯಶಂಕರ್‌.ಕೆ ,ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಬಿನಾ ಪ್ರಿಯಾ ನೊರೊನ್ಹಾ, ಡೊನ್‌ ಬೊಸ್ಕೊ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಪೌಲಿನ್‌ ಲೋಬೋ ವರದಿ ವಾಚಿಸಿದರು.ಸಿ| ಬ್ರಿಜಿತ್‌ ಮಾಡ್ತಾ ಸಂಸ್ಥೆಗಳ ದತ್ತಿನಿಧಿಗಳ ವಿವರ ನೀಡಿದರು.

Advertisement

ಆಡಳಿತ ಮಂಡಳಿಯ ಸದಸ್ಯರು, ಚರ್ಚ್‌ಪಾಲನ ಮಂಡಳಿಯ ಸದಸ್ಯರು, ಶಿಕ್ಷಣ ಸಂಸ್ಥೆಗಳ ಬೋಧಕ,ಬೋಧಕೇತರ ವೃಂದ, ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು,ಹೆತ್ತವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ನಾಯಕ ಪ್ರಥ್ವಿ ಸ್ವಾಗತಿಸಿದರು. ಹ್ಯಾನಿಯಲ್‌ ಡಿಸೋಜಾ ಮತ್ತು ವರ್ಜಿನಿಯಾ ಮತಾಯಸ್‌ ನಿರೂಪಿಸಿ, ವಿದ್ಯಾರ್ಥಿ ನಾಯಕಿ ಚಾರಿತ್ರ್ಯ ವಂದಿಸಿದರು.

ಧ್ವಜಾರೋಹಣ, ಬಹುಮಾನ ವಿತರಣೆ

ಬೆಳಗ್ಗೆ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಮುದರಂಗಡಿ ಸಂತ ಫ್ರಾನ್ಸಿಸ್‌ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರೆ|ಫಾ| ಫೆಡ್ರಿಕ್‌ ಡಿಸೋಜಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರತಿಭಾ ಪುರಸ್ಕಾರ ,ದತ್ತಿನಿಧಿ ಹಾಗೂ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ನಿಟ್ಟೆಯ ಡಾ|ಎನ್‌ಎಸ್‌ಎಎಂ ಪ.ಪೂ. ಕಾಲೇನಲ್ಲಿ ನಡೆದ ಬಾಲಕರ ಹಾಗೂ ಬಾಲಕಿಯರ ಫುಟ್ಬಾಲ್‌ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾದ ಬಾಲಕರ ಹಾಗೂ ಬಾಲಕಿಯರ ತಂಡ, ಕಾಪು ತಾ|ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ಬಾಲಕರು ಹಾಗೂ ಬಾಲಕಿಯರ ತಂಡ ಹಾಗೂ ಕಾಪು ತಾ| ಮಟ್ಟದ ಖೊ-ಖೋ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ಬಾಲಕರ ತಂಡವನ್ನು ಅಭಿನಂದಿಸಲಾಯಿತು. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next