Advertisement

Shirva: ಧಾರ್ಮಿಕ ಕ್ಷೇತ್ರಗಳು ಸಂಸ್ಕಾರ ನೀಡುವ ಕೇಂದ್ರವಾಗಲಿ: ಕೇಮಾರು ಶ್ರೀ

06:39 PM Apr 02, 2024 | Team Udayavani |

ಶಿರ್ವ: ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಂಸðತಿ ಸಂಸ್ಕಾರದ ಶಿಕ್ಷಣ ಸಿಗುತ್ತಿತ್ತು. ನೈತಿಕ ಶಿಕ್ಷಣ ವ್ಯವಸ್ಥೆಯಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ಸಂಸ್ಕಾರವಂತ ದಾನಿಗಳಿಂದ ತುಳುನಾಡಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಿದೆ. ಸಾಮಾಜಿಕ ಮಾಧ್ಯಮ/ಜಾಲತಾಣಗಳಿಂದಾಗಿ ಸಮಾಜದ ಸಂಸ್ಕೃತಿ ಹಾಳು ಮಾಡುವ ಕೆಲಸ ನಡೆಯುತ್ತಿದ್ದು, ಧಾರ್ಮಿಕ ಕ್ಷೇತ್ರಗಳು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡುವ ಕೇಂದ್ರವಾಗಲಿ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

Advertisement

ಅವರು ಎ. 1 ರಂದು ಶಿರ್ವ ಮೂಡುಮಟ್ಟಾರು ಶ್ರೀ ಬಬ್ಬರ್ಯ ಪರಿವಾರ ಸಾನಿಧ್ಯಗಳ ನವೀಕೃತ ಶಿಲಾಮಯ ಗರ್ಭಗೃಹ ಸಮರ್ಪಣೆ, ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅಶೀರ್ವಚನ ನೀಡಿದರು.

ಪಡುಕುತ್ಯಾರು ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಭಕ್ತಿ ಮತ್ತು ಶ್ರದ್ಧೆಯಿಲ್ಲದ ಪೂಜೆಯಲ್ಲಿ ಭಗವಂತನ ದುಂಬಿಯೂ ಕೂಡ ಬರಲು ಸಾಧ್ಯವಿಲ್ಲ. ಶ್ರದ್ಧಾ ಕೇಂದ್ರಗಳು ನಮಗೆ ಮಾರ್ಗದರ್ಶನ ನೀಡುವ ಸಂಸ್ಕಾರ ಕೇಂದ್ರಗಳಾಗಬೇಕಿದ್ದು, ಮುಗ್ಧ ಭಕ್ತಿ ಮತ್ತು ಶ್ರದ್ಧೆಗೆ ಭಗವಂತ ಒಲಿಯುತ್ತಾನೆ ಎಂದು ಹೇಳಿದರು.

ಆರ್‌.ಕೆ. ಸ್ಟೋನ್‌ ಕ್ರಶರ್ನ ಮಾಲಕ ಇನ್ನಾ ದಿವಾಕರ ಶೆಟ್ಟಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿರ್ವ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ರಘುಪತಿ ಗುಂಡು ಭಟ್‌ ಮಾತನಾಡಿದರು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Advertisement

ದೈವಸ್ಥಾನದ ಪರಿಚಾರಕ ವರ್ಗದವರಾದ ಮಧ್ಯಸ್ಥ ಶಂಕರ ಶೆಟ್ಟಿ,ನಾಗಸ್ವರ ವಾದಕ ಶಮ್ಮಿ ಗಫೂರ್‌,ದೈವ ನರ್ತಕ ತುಕ್ರ ಪಾಣಾರ,ಮುಕ್ಕಾಲಿ ಪ್ರಕಾಶ ಶೆೆಟ್ಟಿ, ದೈವದ ಪಾತ್ರಿ ಜಯ ಮಡಿವಾಳ ಮತ್ತು ಕಾಕು ಮಡಿವಾಳ ಹಾಗೂ ದಾನಿಗಳಾದ ಹೇಮಾ ಶಂಭು ಶೆಟ್ಟಿ ದಂಪತಿ,ದಿವಾಕರ ಶೆಟ್ಟಿ ಮತ್ತು ಸಂತೋಷ್‌ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಧನಸಹಾಯ ನೀಡಿದ ದಾನಿಗಳನ್ನು ಗೌರವಿಸಲಾಯಿತು.

ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ, ಸಮಿತಿಯ ಗೌರವಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ, ದೈವಸ್ಥಾನದ ಆಡಳಿತ ಮೊಕ್ತೇಸರ ಭಗವಾನ್‌ ದಾಸ್‌ ಶೆಟ್ಟಿ,ಹಳೆಮನೆ, ಆಡಳಿತ ಸಮಿತಿಯ ಗೌರವಾಧ್ಯಕ್ಷ ಶಂಕರ ಶೆಟ್ಟಿ ಧರ್ಮೆಟ್ಟು, ಅಧ್ಯಕ್ಷ ಜಗದೀಶ ಶೆಟ್ಟಿ ಮೂಡುಮನೆ, ರತನ್‌ ಶೆಟ್ಟಿ ಕಲ್ಲೊಟ್ಟು, ಉದ್ಯಮಿ ಗಳಾದ ಎಸ್‌.ಕೆ. ಸಾಲಿಯಾನ್‌ ಬೆಳ್ಮಣ್‌, ಚಂದ್ರ ಶೇಖರ ಶೆಟ್ಟಿ, ಸಂತೋಷ ಪೂಜಾರಿ ಅಶೋಕ್‌ ಸುವರ್ಣ, ಜೀಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರೀಶ್‌ ಪೂಜಾರಿ ಕೊಲ್ಲಂಬೆಟ್ಟು ಜತೆ ಕಾರ್ಯದರ್ಶಿ ರವಿ ಪೂಜಾರಿ ಜತೆ ಕೋಶಾಧಿಕಾರಿ ಸಂದೀಪ್‌ ಪೂಜಾರಿ ಕಾಪಿಕಾಡು, ಹರೀಶ್‌ ಕಾಪಿಕಾಡು, ಬಾಲಕೃಷ್ಣ ಶೆಟ್ಟಿ, ಸುಧಾಕರ ಶೆಟ್ಟಿ ವೇದಿಕೆಯಲ್ಲಿದ್ದರು.

ಕೋಶಾಧಿಕಾರಿ ಮಂಜುನಾಥ ಆಚಾರ್ಯ ಪ್ರಸ್ತಾವನೆಗೈದರು. ಎನ್‌.ಆರ್‌. ದಾಮೋದರ ಶರ್ಮಾ ಸ್ವಾಗತಿಸಿ, ವಂದಿಸಿದರು. ಸುರೇಂದ್ರ ಕೊಪ್ಪಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next