Advertisement
ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಸೆಕ್ಷನ್ ಆಫೀಸರ್, ಕಚೇರಿ ಸಿಬಂದಿ ಮತ್ತು 15 ಲೈನ್‌ಮ್ಯಾನ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲದ ಪೂರ್ವ ತಯಾರಿಯಾಗಿ ಮರದ ಗೆಲ್ಲುಗಳನ್ನು ಕಡಿಯುವ ಕಾರ್ಯ ನಡೆಯುತ್ತಿದ್ದು, ಇದರೊಂದಿಗೆ ಹಾನಿಗೊಳಗಾದ ವಿದ್ಯುತ್ ತಂತಿ, ಕಂಬಗಳು ಹಾಗೂ ಟ್ರಾನ್ಸ್Õಫಾರ್ಮರ್ ಮೊದಲಾದವುಗಳ ನಿರ್ವಹಣೆಯೂ ನಡೆಯುತ್ತಿದೆ.
ಕೋವಿಡ್ 19 ವೈರಸ್ ಹರಡದಂತೆ ಸಿಬಂದಿ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ ಕೆಲಸ ನಿರ್ವಹಿಸುತ್ತಿದ್ದು ಜನರ ಕರೆಗಳಿಗೆ ಶೀಘ್ರ ಸ್ಪಂದಿಸಿ ರಿಪೇರಿ ನಡೆಸಲಾಗುತ್ತಿದೆ. ಈ ಮಧ್ಯೆ ಅಕಾಲಿಕವಾಗಿ ಸುರಿದ ಸಿಡಿಲು ಮಳೆಗೆ ಕೆಲವು ಕಡೆ ಹಾನಿಯಾಗಿದ್ದು ರಿಪೇರಿ ನಡೆಸಲಾಗಿದೆ. ಶಾಂತಿಗುಡ್ಡೆ ಬಳಿ ಮಳೆಗೆ ಬಿದ್ದ ಮರದಿಂದಾಗಿ ಹಾನಿ ಸಂಭವಿಸಿದ್ದು ಸರಿಪಡಿಸಲಾಗಿದೆ. ಲಾಕ್‌ಡೌನ್ ನಿಂದಾಗಿ ಮನೆಮಂದಿಯೆಲ್ಲಾ ಮನೆಯಲ್ಲೇ ಇರುವ ಕಾರಣ ವಿದ್ಯುತ್ ವ್ಯತ್ಯಯವಾದ ಕೂಡಲೇ ಮೆಸ್ಕಾಂಗೆ ದೂರು ಬರುತ್ತಿದ್ದು ಸಿಬಂದಿ ಶ್ರಮಿಸುತ್ತಿದ್ದಾರೆ ಎಂದು ಶಿರ್ವ ಸೆಕ್ಷನ್ ಆಫೀಸರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ. ನಿತ್ಯದ ಕೆಲಸ
ಜನರ ಮೂಲಭೂತ ಅವಶ್ಯಕತೆಯಾದ ವಿದ್ಯುತ್ ಕಡಿತಗೊಂಡಲ್ಲಿ ಸರಬರಾಜು ಮಾಡಲು ಎಂದಿನಂತೆ ದಿನನಿತ್ಯದ ಕೆಲಸ ನಿರ್ವಹಿಸುತ್ತಿದ್ದೇವೆ.ಜನರ ಕರೆಗಳಿಗೆ ಕೂಡಲೇ ಸ್ಪಂದಿಸುತ್ತಿದ್ದು ಜನರೂ ತಾಳ್ಮೆ ವಹಿಸಿ ನೆರವು ನೀಡಬೇಕಿದೆ.
-ಸುಜಿತ್, ಲೈನ್‌ಮ್ಯಾನ್,ಶಿರ್ವ