ಕಾರವಾರ: ಸದ್ಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರೂ ನದಿಯ ಮೇಲ್ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ. ಬ್ರಿಜ್ ಮೌಂಟೆಡ್ ಡ್ರೆಜ್ಜಿಂಗ್ ಮಾಡಲು ಸಾಧ್ಯವೇ ಎಂದು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದ್ದಾರೆ.
ಶಿರೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಕುಮಟಾ ಬಾಡದ ಜಗನ್ನಾಥ ಹಾಗೂ ಗಂಗೆಕೊಳ್ಳದ ಲೋಕೇಶ್ ಶಿರೂರು ಭೂ ಕುಸಿತದಲ್ಲಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ 13 ದಿನಗಳಿಂದ ಶೋಧ ನಡೆಸಲಾಗುತ್ತಿತ್ತು. ಆದರೆ ಯಾರೂ ಪತ್ತೆಯಾಗಿಲ್ಲ ಎಂದರು.
ಗಂಗಾವಳಿ ನದಿ ಅತ್ಯಂತ ವೇಗದಿಂದ ಹರಿಯುತ್ತಿದ್ದು, ಲಾರಿ ಇರುವ ಜಾಗ ತಲುಪಲು ಈಜು ತಜ್ಞರಿಂದ ಸಾಧ್ಯವಾಗುತ್ತಿಲ್ಲ. ನದಿಯಾಳದ ನೀರಿನ ವೇಗ ಕಡಿಮೆಯಾದ ತತ್‌ಕ್ಷಣ ಪುನಃ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಕೇರಳ ಸರಕಾರಕ್ಕೆ ಈ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ.
– ಮಂಕಾಳು ವೈದ್ಯ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ