Advertisement

Shiruru Hill Collapse: ಪ್ಲ್ಯಾನ್ ‘ಬಿ’ ಸಿದ್ಧತೆ ಮಾಡಿಕೊಂಡ ಶಾಸಕ ಸತೀಶ ಸೈಲ್

09:46 PM Jul 29, 2024 | Team Udayavani |

ಅಂಕೋಲಾ : ಶಿರೂರು ಗುಡ್ಡ ಕುಸಿತದ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಂಡ ಹಿನ್ನೆಲೆ ಶಾಸಕ ಸತೀಶ ಸೈಲ್ ಸುಮ್ಮನೆ ಕುಳಿತಿಲ್ಲ. ಪ್ಲ್ಯಾನ್ ಎ ದಲ್ಲಿ ಯಶಸ್ಸು ಸಿಗದ ಕಾರಣ ಪ್ಲ್ಯಾನ್ ಬಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

Advertisement

ಶಾಸಕ ಸತೀಶ ಸೈಲ್ ಮಿತ್ರ ಕೇರಳದಲ್ಲಿ ಇರುವವರ ಬಳಿ ಬಾರ್ಜ್‌ ಮೌಂಟೆಡ್ ಬೂಮ್ ಕ್ರಾಲಿಂಗ್ ಎಕ್ಸಾವೇಟರ್ ಇರುವುದನ್ನು ಪತ್ತೆ ಮಾಡಿ ಅದನ್ನು ತರಿಸುವ ಪ್ಲ್ಯಾನ್ ಮಾಡಿದ್ದಾರೆ. ಇದು ಈಗಾಗಲೇ ಕೇರಳ ಸರಕಾರ ಇದಕ್ಕೆ ಸಮ್ಮತಿಸಿದ್ದು ಇದು ಕೇರಳದ ಅಗ್ರಿಕಲ್ಚರ್ ಇಲಾಖೆ ಬಳಿ ಇದೆ. ಇದರ ಆಪರೇಟರ್ ಮತ್ತು ಇಂಜಿನಿಯರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಲಿದ್ದಾರೆ.

ಮಂಗಳವಾರ ಬೆಳಿಗ್ಗೆ ಈ ತಂಡ ಶಿರೂರು ಗುಡ್ಡ ಕುಸಿತ ಸ್ಥಳಕ್ಕಾಗಮಿಸಲಿದೆ. ಇದಲ್ಲದೆ ಬೆಳಗಾವಿಯಲ್ಲಿ 25 ಹಾರ್ಸ್ ಪವರ್ ಇರುವ ಪಂಪ್ ತರುವ ಯೋಚನೆಯು ಮಾಡಲಾಗಿದೆ. ಇದು ನೀರಿನಡಿಯಲ್ಲಿರುವ ಮಣ್ಣು ಎತ್ತಿ ಹೊರಹಾಕುವ ಸಾಮರ್ಥ್ಯವಿದೆ ಎಂದು ಸತೀಶ ಸೈಲ್ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next