Advertisement

ಮುಂಬೈನಿಂದ ಉಡುಪಿಗೆ ಆಗಮಿಸಿದ್ದ ಬಸ್ ಗಳ ತಪಾಸಣೆ: ಆಸ್ಪತ್ರೆಗೆ ದಾಖಲಾದ ಎಂಟು ಶಂಕಿತರು

11:12 AM Mar 27, 2020 | keerthan |

ಮಣಿಪಾಲ: ಮುಂಬೈನಿಂದ ಊರಿಗೆ ಆಗಮಿಸಿದ್ದ ಸುಮಾರು ಐದು ಖಾಸಗಿ ಬಸ್ ಗಳನ್ನು ಬೈಂದೂರಿನ ಶಿರೂರು ಗಡಿಯಲ್ಲಿ ತಪಾಸಣೆ ಮಾಡಿದ್ದು, ಒಟ್ಟು ಎಂಟು ಮಂದಿ ಸೋಂಕು ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

Advertisement

ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಬಸ್ ನಲ್ಲಿ ಉಳಿದವರ ವಿಳಾಸ ಮತ್ತು ಮೊಬೈಲ್ ನಂಬರ್ ಗಳನ್ನು ಪಡೆಯಲಾಗಿದೆ. ಇವರ ಮೇಲೂ ನಿಗಾ ಇಡಲಾಗಿದೆ ಎಂದರು.

ಸದ್ಯಬೈಂದೂರಿನ ಶಿರೂರಿನಲ್ಲಿ ಮಾತ್ರವೇ ಚೆಕ್‍ಫೋಸ್ಟ್ ತೆರೆದಿದ್ದು, ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಚೆಕ್‍ಫೋಸ್ಟ್ ತೆರೆಯುವ ಇರಾದೆ ಇಟ್ಟುಕೊಂಡಿದ್ದೇವೆ. ಥರ್ಮಲ್‌ ಗನ್‌ನ ಕೊರತೆವಿದ್ದು, ಆನ್‍ಲೈನ್‍ನಲ್ಲೂ ಸಿಗುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ಬರೆದಿದ್ದು, ಉಪಕರಣ ಪೂರೈಕೆಯಾದ ಕೂಡಲೇ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಿಂದ ಉಡುಪಿಗೆ ಸಂಪರ್ಕಿಸುವ ರಸ್ತೆಯಲ್ಲಿ ಚೆಕ್‍ಫೋಸ್ಟ್ ತೆರೆಯಲಾಗುವುದೆಂದು ಜಿಲ್ಲಾಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next