Advertisement

Shirur Landslide; ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಮಾಹಿತಿ ಪಡೆದ ಸಂಸದ ಕಾಗೇರಿ

05:34 PM Jul 27, 2024 | Team Udayavani |

ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡ ಕುಸಿದ ಸ್ಥಳಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಭೇಟಿ ‌ನೀಡಿದರು.

Advertisement

ಕಣ್ಮರೆಯಾದವರ ಪೈಕಿ ಇನ್ನೂ ಪತ್ತೆಯಾಗದ ಭಾರತ್ ಬೆಂಜ್ ಚಾಲಕ ಅರ್ಜುನ್, ಉಳುವರೆಯ ಜಗನ್ನಾಥ, ಗಂಗೆಕೊಳ್ಳದ ಲೋಕೇಶ್ ನಾಯ್ಕ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಸಂಸದರಿಗೆ ಮಾಹಿತಿ ನೀಡಿದರು. ಲಾರಿ ಹಾಗೂ ‌ಕಾಣೆಯಾದವರ ಹುಡುಕಾಟಕ್ಕೆ ಕೈಗೊಂಡ ಕ್ರಮದ ಬಗ್ಗೆ ಶನಿವಾರದ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು.

ನೇವಿ, ಎಸ್ ಡಿಆರ್ಎಫ್, ಎನ್ ಡಿಆರ್ ಎಫ್ ಹಾಗೂ ಅಡ್ವಾನ್ಸ್ಡ್ ಐ ಬೋರ್ಡ್ ಡ್ರೋಣ್ ಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು. ರಕ್ಷಣಾ ತಂಡಗಳ ಮಾಹಿತಿ ಪಡೆದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಪತ್ತೆಯಾದ ಸ್ಥಳೀಯ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳದ ಚಾಲಕ ಅರ್ಜುನ್ ಅವರನ್ನು ಶೀಘ್ರ ಪತ್ತೆ ಮಾಡುವಂತೆ ರಕ್ಷಣಾ ತಂಡಕ್ಕೆ ವಿನಂತಿಸಿದರು.

ನಾಪತ್ತೆಯಾದ ಜಗನ್ನಾಥ ನಾಯ್ಕ ಅವರ ಮನೆಗೆ ಭೇಟಿ ನೀಡಿದ ಸಂಸದರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಿರೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲಾಯಿತು. ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಯಿತು.

Advertisement

ಆಗಾಗ ಪ್ರವಾಹ ಬರುವುದರಿಂದ ಸ್ಥಳೀಯರಿಗೆ ಗಂಗಾವಳಿ ತಟದಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತದೆ. ಅವರಿಗೆ ಕಂದಾಯ ಇಲಾಖೆಯ ಜಾಗಗಳನ್ನು ಗುರುತಿಸಿ ಮನೆ ನಿರ್ಮಿಸಿ ಕೊಡುವುದು, ಅವರ ಜೀವನಕ್ಕೆ ಆಧಾರ ಕಲ್ಪಿಸಿಕೊಡುವ ಕುರಿತು ಸಂಸದರೊಂದಿಗೆ ಸ್ಥಳೀಯರು ಚರ್ಚಿಸದರು. ತಹಶೀಲ್ದಾರ್ ಶಂಕರ್‌, ಸಹಾಯಕ ಕಮಿಷನರ್ ಕಾಂಬ್ಳೆ ಇದ್ದರು. ಮಾಜಿ‌ ಶಾಸಕಿ ರೂಪಾಲಿ ನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next