Advertisement
ಗ್ರಾ. ಪಂ. ಅಧ್ಯಕ್ಷೆ ಹಾಗೂ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಟವರ್ ಅನ್ನು ಜನವಸತಿ ಇಲ್ಲದೆಡೆಗೆ ಸ್ಥಳಾಂತರಿಸಲು ಎಂದು ಆಗ್ರಹಿಸಿದರು.
ಪ್ರತಿಭಟನಕಾರರು ಪಂಚಾಯತ್ ಆವರಣದೊಳಕ್ಕೆ ಪ್ರವೇಶಿಸದಂತೆ ಗೇಟು ಹಾಕಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮೈಕ್‌ನಲ್ಲಿ ಘೋಷಣೆಗಳನ್ನು ಕೂಗುವುದಕ್ಕೆ ಆರಂಭಿಸಿದ ಕೂಡಲೇ ಸ್ಥಳಕ್ಕೆ ಬಂದ ಪಂಚಾಯತ್ ಅಧ್ಯಕ್ಷೆ ಲತಾ ಹೆಗ್ಡೆ, ಹತ್ತಿರದಲ್ಲಿರುವ ಖಾಸಗಿ ಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಮೈಕ್ ಬಂದ್ ಮಾಡಲು ಸೂಚಿಸುವಂತೆ ಪೊಲೀಸರಿಗೆ ತಿಳಿಸಿದರು. ಇದರಿಂದ ಉದ್ರಿಕ್ತಗೊಂಡ ಪ್ರತಿಭಟನಕಾರರು “ನಿಮಗೆ ಅನಧಿಕೃತವಾಗಿ, ಲಂಚದ ಆಮಿಷದಿಂದ ಅಂಗನವಾಡಿಯ ಬಳಿಯೇ ಮೊಬೈಲ್ ಟವರ್‌ಗೆ ಅನುಮತಿ ನೀಡಲಿಕ್ಕಾಗುತ್ತದೆ. ಆಗ ಇಲ್ಲದ ಮಕ್ಕಳ ಮೇಲಿನ ಮಮಕಾರ ಈಗೆಲ್ಲಿಂದ ಬಂತು?’ ಎಂದು ಪ್ರಶ್ನಿಸಿದರು. ಇದಕ್ಕೆ ನಿರ್ದಿಷ್ಟ ಉತ್ತರ ನೀಡದ ಅಧ್ಯಕ್ಷೆ ತನ್ನ ಕಚೇರಿಗೆ ಮರಳಿದರು.
Related Articles
Advertisement
ಪ್ರತಿಭಟನೆಗೂ ಪಂಚಾಯತ್ ಅನುಮತಿ ಅಗತ್ಯ!ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡುವರು ಪಂಚಾಯತ್‌ನಲ್ಲಿ ಅನುಮತಿ ಪಡೆಯಬೇಕು ಎಂದು ಶಿರ್ತಾಡಿ ಗ್ರಾ.ಪಂ.ನಲ್ಲಿ ತೀರ್ಮಾನಿಸಿ ಜಾರಿಗೆ ತರಲಾಗಿದೆ. ಎಲ್ಲೂ ಇಲ್ಲದ ಈ ರೀತಿಯ ನಿಯಮದಿಂದಾಗಿ ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತವಾಯಿತು. ಈ ನಿರ್ಣಯದ ವಿರುದ್ಧ ಪಂಚಾಯತ್ ಆವರಣದೊಳಗೆ ಕಾರ್ಮಿಕ ಹೋರಾಟಗಾರ ಸುದತ್ತ ಜೈನ್ ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಮನವಿ ಸ್ವೀಕರಿಸುವುದಕ್ಕಾಗಿ ಅಧ್ಯಕ್ಷೆಯನ್ನು ಸ್ಥಳಕ್ಕೆ ಕರೆಯುವಂತೆ ಪ್ರತಿಭಟನಕಾರರು ಎಎಸ್‌ಐ ಮೂಲಕವಾಗಿ ಕೇಳಿಕೊಂಡಾಗ ಅದಕ್ಕೊಪ್ಪದ ಅಧ್ಯಕ್ಷೆ ಲತಾ ಹೆಗ್ಡೆ, ಈಗ ಮೀಟಿಂಗ್ ಇದ್ದು, ಅದು ಮುಗಿದ ಮೇಲೆ ಬರುವುದಾಗಿ ತಿಳಿಸಿದರು. ಸಭೆ ಮುಗಿದ ಬಳಿಕ ಉಪಾಧ್ಯಕ್ಷ ರಾಜೇಶ್ ಸುವರ್ಣ ಅವರನ್ನು ಪ್ರತಿಭಟನಕಾರರ ಬಳಿಗೆ ಕಳುಹಿಸಿದ ಅಧ್ಯಕ್ಷೆ, ತಾನು ಮನವಿ ಸ್ವೀಕರಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.