ಬಾಗೇಪಲ್ಲಿ: ಮಾಸ್ಕ್ ಧರಿಸದೇ ಅನಾವಶ್ಯಕವಾಗಿ ಓಡಾಡುತ್ತಿದ್ದ ಪುಂಡನಿಗೆ ಪೊಲೀಸ್ ಪೇದೆ ಶರ್ಟ್ ಬಿಚ್ಚಿಸಿ ಮಾಸ್ಕ್ಆಗಿ ಕಟ್ಟಿಸಿದ ಘಟನೆ ಪಟ್ಟಣದ ಎಸ್‌ಬಿಐ ವೃತ್ತದಲ್ಲಿ ಭಾನುವಾರ ನಡೆದಿದೆ. ಬಾಗೇಪಲ್ಲಿ ಪಟ್ಟಣದಲ್ಲಿ, ಕೋವಿಡ್ ವೈರಸ್ ಹರಡದಂತೆ ತಡೆಗೆ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದು, ಅವಶ್ಯಕತೆ ಇದ್ದರೆ ಮಾತ್ರ ಮಾಸ್ಕ್ ಧರಿಸಿ ಹೊರಗೆ ಬರಬೇಕು. ಪಟ್ಟಣದ ಎಸ್‌ಬಿಐ ವೃತ್ತದಲ್ಲಿ ಮಾಸ್ಕ್ ಧರಿಸದೆ ಪುಂಡನೊಬ್ಬ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಮುಖ್ಯ ಪೇದೆ ಶ್ರೀನಾಥ್ ವಾಹನ ನಿಲ್ಲಿಸಿ ಮಾಸ್ಕ್ ಧರಿಸದ ಕಾರಣ ದಂಡ ಪಾವತಿಸುವಂತೆ ಕೇಳಿದಾಗ ಸವಾರ ತನ್ನಲ್ಲಿ ಹಣ ಇಲ್ಲ ಎಂದು ಹೇಳಿದ್ದಾನೆ. ಕೂಡಲೇ ಆತನ ಶರ್ಟ್ ಬಿಚ್ಚಿಸಿ ಮಾಸ್ಕ್ ಆಗಿ ಕಟ್ಟಿಸಿ ಇನ್ನೊಮ್ಮೆ ಅನಾವಶ್ಯಕವಾಗಿ ಓಡಾಡುವುದು ಮತ್ತು ಮಾಸ್ಕ್ ಧರಿಸದೆ ಕಂಡು ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಹೇಳಿ ಕಳುಹಿಸಿದ್ದಾರೆ. ಮುಖ್ಯ ಪೇದೆ ಶ್ರೀನಾಥ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.