Advertisement
ಶಬರ ಸಂಸ್ಥೆಯು ಸ್ಥಳೀಯ ಮಾರಿಕಾಂಬಾ ದೇವಸ್ಥಾನ, ಸಹಕಾರದಲ್ಲಿ ಹಮ್ಮಿಕೊಂಡ ನಮ್ಮೂರ ಹಬ್ಬದ ಸ್ಪರ್ಧಾ ಕಾರ್ಯಕ್ರಮಗಳಿಗೆ ಮಕ್ಕಳಿಂದ ವೃಕ್ಷ ಪೂಜೆ ಮಾಡಿ ಚಾಲನೆ ನೀಡಲಾಯಿತು..
Related Articles
Advertisement
ಕೋಡ್ನಗದ್ದೆ ಪಂಚಾಯತ್ ವ್ಯಾಪ್ತಿಯ ಪುರುಷರಿಗೆ ಶಂಖನಾದ ಸ್ಪರ್ಧೆ ಮತ್ತು ಒಂದೇ ಒಂದು ನಿಮಿಷ ಸ್ಪರ್ಧೆಗಳಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಉತ್ಸಾಹದಿಂದ ಪಾಲ್ಗೊಂಡರು. ಮಹಿಳೆಯರಿಗೆ ಸಿಹಿ ತಿಂಡಿ ಸ್ಪರ್ಧೆ, ನೈಸರ್ಗಿಕ ವಸ್ತುಗಳನ್ನು ಬಳಸಿ ಆರತಿ ತಾಟಿನ ಸ್ಪರ್ಧೆ ಗಮನ ಸೆಳೆಯಿತು. ಮಧ್ಯಾಹ್ನ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗಳು ಮತ್ತು ಸ್ವ ಸಹಾಯ ಸಂಘಗಳ ಸದಸ್ಯರುಗಳಿಂದ ಭಜನಾ ಕಾರ್ಯಕ್ರಮ ಜರುಗಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಿಮ್ಮಾ ಗೌಡ ಮತ್ತು ಗಣಪತಿ ಗೌಡ ಸಂಗಡಿಗರಿಂದ ಕೊಳಲಾಟ. ಬೆಳ್ಳಾ ಗೌಡ ಸಂಗಡಿಗರಿಂದ ಕೋಲಾಟ. ರಾಜು ಸಂಪೆ ಅವರಿಂದ ಹಾಸ್ಯ ವೈವಿಧ್ಯ, ಮಾರಿಕಾಂಬಾ ಪ್ರಾಸಾದಿತ ತಾಳಮದ್ದಳೆ ಕೂಟ ಮಣ್ಮನೆ ಇವರಿಂದ ಸುಭದ್ರಾ ಕಲ್ಯಾಣ ತಾಳಮದ್ದಳೆ ಕಾರ್ಯಕ್ರಮ ಕಳೆಕಟ್ಟಿತು. ಗಜಾನನ ಭಟ್ಟ ತುಳಗೇರಿ, ಪ್ರಶಾಂತ ಭಂಡಾರಿ, ರಾಧಾಕೃಷ್ಣ ಕಲ್ಚಾರ್, ಮಂಜುನಾಥ ಗೊರನಮನೆ, ರಾಮಚಂದ್ರ ಭಟ್ಟ ಶಿರಳಗಿ, ಅರುಣಕುಮಾರ ಭಟ್ಟ ಮತ್ತು ಪ್ರವೀಣ ಮಣ್ಮನೆ ಭಾಗವಹಿ ಕಾರ್ಯಕ್ರಮದಲ್ಲಿ ರಂಗೇರಿಸಿದರು.
ಸಾಂಸ್ಕೃತಿಕ, ಸಮ್ಮಾನ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಮಾತನಾಡಿದ ಪ್ರಮೋದ ಹೆಗಡೆ, ನಮ್ಮೂರು ಎಂದರೆ ಏನು ಎಂಬುದು ಯುವ ಜನರಿಗೆ ಗೊತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸಲು ನಮ್ಮ ಕುರಿತು ನಾವೇ ತಿಳಿದುಕೊಳ್ಳಲು ಇಂಥ ಹಬ್ಬ ಪ್ರತಿ ಊರಿನಲ್ಲೂ ಆಗಬೇಕು. ನಮ್ಮೂರು ಎಂದರೆ ಏನು ಹೇಗೆ ಪ್ರಶ್ನೆ ಮಾಡಿಕೊಂಡು ಅರಿಯಬೇಕಾದ ಕಾಲ ಘಟ್ಟದಲ್ಲಿ ಇದ್ದೇವೆ. ನಮ್ಮೂರ ಹಬ್ಬ ಪ್ರತಿ ಊರಿನಲ್ಲಿ ಆದರೆ ಸಂಸ್ಕಾರ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು.
ಅಧ್ಯಕ್ಷರಾಗಿ ಮಾರಿಕಾಂಬಾ ದೇವಸ್ಥಾನದ ಅರ್ಚಕ ನಾರಾಯಣ ಹೆಗಡೆ ಮಣ್ಮನೆ ವಹಿಸಿದ್ದರು. ಶಿವಗಂಗಾ ಸ್ವ ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ಸುನಂದಾ ಹೆಗಡೆ ಕಡೆಮನೆ, ಸಂಯೋಜಕರಾದ ನಾಗರಾಜ್ ಜೋಶಿ ಸೋಂದಾ, ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಹೆಗಡೆ, ಪ್ರಮುಖರಾದ ಭುವನೇಶ್ವರಿ ಜೋಶಿ, ರಾಮಚಂದ್ರ ಭಟ್ಟ ಶಿರಳಗಿ ಇತರರು ಇದ್ದರು. ಅರುಣಕುಮಾರ ಭಟ್ಟ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ನವದೆಹಲಿಯ ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವ ನೀಡಿದ್ದವು.