Advertisement

ಶಿರೂರು ಮನೆಗೆ ನುಗ್ಗಿದ ಕಳ್ಳರು, 30 ಲಕ್ಷ ನಗ -ನಗದು ಕಳ್ಳತನ

10:52 PM Apr 10, 2023 | Team Udayavani |

ಬೈಂದೂರು: ಇಲ್ಲಿನ ಮಾರ್ಕೆಟ್‌ ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 18 ಲಕ್ಷ ರುಪಾಯಿ ಚಿನ್ನ ಹಾಗೂ 12 ಲಕ್ಷ ನಗದು ಕದ್ದೊಯ್ದಿದ್ದಾರೆ.ಶಿರೂರು ಮಾರ್ಕೆಟ್‌ ಬಳಿ ಹಾರ್ಡ್‌ವೇರ್‌ ಉದ್ಯಮ ನಡೆಸುತ್ತಿರುವ ಅಜೀಮ್‌ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ.ರಾತ್ರಿ ಊಟ ಮಾಡಿ ಮಸೀದಿಗೆ ಪ್ರಾರ್ಥನೆಗೆ ತೆರಳಿ ವಾಪಾಸ್ಸು ಬರುವ ವೇಳೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.ಸರಣಿ ರಜೆ ಇರುವ ಕಾರಣ ವ್ಯಾಪಾರದ ಹಣವನ್ನು ಬ್ಯಾಂಕಿಗೆ ಹಾಕಲಾಗದೆ ಮನೆಯಲ್ಲಿಟ್ಟಿದ್ದರು.ಈ ಕುರಿತು ಮಾಹಿತಿ ಇರುವವರೆ ಕಳ್ಳತನ ನಡೆಸಿರುವ ಸಾಧ್ಯತೆ ಕೂಡ ಇದೆ.

Advertisement

ರಾತ್ರಿಯಿಡೀ ತೆರೆದಿರುವ ಅನಧೀಕ್ರತ ಅಂಗಡಿಗಳು,ಗಾಂಜಾ ಅಕ್ರಮ ಚಟುವಟಿಕೆಯ ತಾಣವಾದ ಹೆದ್ದಾರಿ ಬದಿ ಅಂಗಡಿಗಳು. ಗಂಭೀರವಾಗಿ ಪರಿಗಣಿಸದ ಇಲಾಖೆ;ಶಿರೂರು ಟೋಲ್‌ ಗೇಟ್‌ ಸಮೀಪದಿಂದ ಸೇರಿ ಬೈಂದೂರು ಮರವಂತೆಯವರಗೆ ಹೆದ್ದಾರಿ ಪಕ್ಕದಲ್ಲಿ ಅನಧೀಕೃತ ಅಂಗಡಿಗಳು ದಿನಕ್ಕೊಂದರಂತೆ ತಲೆ ಎತ್ತುತ್ತಿದೆ.ಮಾತ್ರವಲ್ಲದೆ ಯಾವುದೆ ಅನುಮತಿ ದಾಖಲೆ ಇಲ್ಲದಿದ್ದರು ಕೂಡ ರಾತ್ರಿ ಇಡಿ ತೆರೆದಿರುವುದರ ಜೊತೆಗೆ ಮದ್ಯ ಮಾರಾಟ ನಡೆಯುತ್ತಿರುವುದು ಕುರಿತು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರು.ಶಿರೂರು ಟೋಲ್‌ಗೇಟ್‌ ಪರಿಸರದಲ್ಲಿ ಇದುವರಗೂ ಹಲವು ಗಾಂಜಾ ಪ್ರಕರಣಗಳು ಪತ್ತೆಯಾಗಿದೆ.ಈ ಭಾಗದಲ್ಲಿ ಅನೇಕ ಅಪರಿಚಿತ ವಾಹನಗಳು ರಾತ್ರಿ ವೇಳೆ ಬರುತ್ತಿವೆ.ಮದ್ಯ ಮಾರಾಟ,ಗೋ

ಕಳ್ಳತನ,ಸಾಗಾಟ,ಗಾಂಜಾ ವ್ಯವಹಾರ ಕೂಡ ನಡೆಯುತ್ತಿರುವ ಮಾಹಿತಿಗಳಿವೆ.ಕಳೆದ ವಾರ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್‌ ಕೂಡ ಕಿಡಿಗೇಡಿಗಳು ಹರಿದು ಹಾಕಿದ್ದರು.ಇಲ್ಲಿನ ಅಂಗಡಿಗಳು ರಾತ್ರಿಯಿಡಿ ತೆರೆದಿರುವುದೆ ಇದಕ್ಕೆ ಕಾರಣವಾಗಿರುವ ಸಾಧ್ಯತೆಗಳಿವೆ.ಕನಿಷ್ಟ ಪಕ್ಷ ರಾತ್ರಿ ಹನ್ನೆರಡು ಗಂಟೆಯ ಬಳಿಕ ಇಂತಹ ಅನಧೀಕ್ರತ ಅಂಗಡಿಗಳು ಮುಚ್ಚಿದರೆ ಅಪರಾಧ ಪ್ರಕರಣ ಕಡಿಮೆಯಾಗುತ್ತದೆ ಅನೋ°ದು ಸಾರ್ವಜನಿಕ ವಿಚಾರ. ಹೀಗಾಗಿ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಿದೆ.ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಚೆಕ್‌ ಪೋಸ್ಟ್‌ ,ಗಸ್ತುವಾಹನ,ತಪಾಸಣೆ ಇದ್ದರು ಕೂಡ ಇಷ್ಟು ದೊಡ್ಡ ಕಳ್ಳತನ ನಡೆದಿರುವುದು ಆತಂಕ ಉಂಟು ಮಾಡಿದೆ.ಶಿರೂರು ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಿರಂತರವಾಗಿ ನಡೆಯುತ್ತಿದೆ.ಹೀಗಾಗಿ ಇಲಾಖೆ ಕಾನೂನು ಸುರಕ್ಷತೆ ದೃಷ್ಟಿಯಿಂದ ಒಂದಿಷ್ಟು ಬಿಗಿ ಕ್ರಮಕೈಗೊಳ್ಳಬೇಕಿದೆ.ಕಳ್ಳತನ ನಡೆದಿರುವ ಸ್ಥಳಕ್ಕೆ ಬೆ„ಂದೂರು ಆರಕ್ಷಕ ತಂಡ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next