Advertisement
ಕೊಟ್ಯಾಂತರ ರೂಪಾಯಿ ನಷ್ಡ.: ಒತ್ತಿನೆಣೆ ಪರಿಸರದಲ್ಲಿ ಮೇಘಸ್ಪೋಟಗೊಂಡ ಪರಿಣಾಮ ಚಿಲುಮೆ,ಪೇಟೆ ಮುಂತಾದ ನದಿ ತೊರೆಗಳು ತುಂಬಿ ಹರಿದಿದೆ.ಮಳೆಯ ಪರಿಣಾಮ ಹೊಳೆಗಳು ಕೂಡ ತುಂಬಿದ್ದು ಒಮ್ಮೆಲ್ಲೆ ನೀರು ಏರಿದ ಪರಿಣಾಮ ಪೇಟೆ, ಕೆಸರಕೋಡಿ, ಹಡವಿನಕೋಣೆ, ಕುಂಬಾರಕೇರಿ, ಪಡುವರಿ, ಬಹುತೇಖ ಭಾಗ ಜಲಾವ್ರತಗೊಂಡಿದೆ.
Related Articles
Advertisement
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು ತಕ್ಷಣದಿಂದ ಸುರಕ್ಷತಾ ಕ್ರಮ ಮತ್ತು ಮುಂಜಾಗ್ರತೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದು ಸಂತ್ರಸ್ಥರಿಗೆ ಜಿಲ್ಲಾಡಳಿತದಿಂದ ಸಹಾಯ ನೀಡುವ ಭರವಸೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಮಾಜಿ ಶಾಸಕ ಕೇ.ಗೋಪಾಲ ಪೂಜಾರಿ, ಸಹಾಯಕ ನಿರ್ದೇಶಕ ಕೆ.ರಾಜು, ತಹಶೀಲ್ದಾರ್ ಕಿರಣ್ ಗೋರಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗ್ರಾ.ಪಂ.ಅಧ್ಯಕ್ಷೆ ದಿಲ್ ಶಾದ್ ಬೇಗಂ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ,ಗ್ರಾ.ಪಂ.ಸದಸ್ಯರು, ಆರಕ್ಷಕ ಇಲಾಖೆ, ಕಂದಾಯ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ : ಗಂಗಾವತಿ: ನಾಟಿ ಮಾಡಿದ ಭತ್ತದ ಗದ್ದೆ ಮತ್ತು ಹೋಟೆಲ್ ರೆಸಾರ್ಟ್ ಗಳಿಗೆ ನುಗ್ಗಿದ ಮಳೆ ನೀರು