Advertisement

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

04:10 PM Sep 25, 2024 | Team Udayavani |

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಎರಡು ತಿಂಗಳು ಕಳೆದಿದ್ದು, ಕೊನೆಗೂ ನಾಪತ್ತೆಯಾಗಿದ್ದ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್‌ ಅವರ ಮೃತದೇಹ ಬುಧವಾರ(ಸೆ.25ರಂದು) ಪತ್ತೆ ಆಗಿದೆ ಎಂದು ವರದಿಯಾಗಿದೆ.

Advertisement

ಕಳೆದ 6  ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಮೂಲಕ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಅರ್ಜುನ್‌ ಅವರ ಬೆಂಜ್ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಅರ್ಜುನ್‌ ಅವರ ಮೃತದೇಹ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ.

ಲಾರಿಯ ಮಾಲೀಕ ಮನಾಫ್‌ ಅವರು ಇದು ತಮ್ಮದೆ ಲಾರಿಯೆಂದು ಗುರುತಿಸಿದ್ದು, ಲಾರಿಯೊಳಗೆ ಮೃತದೇಹ ಪತ್ತೆಯಾಗಿದೆ. ಇದು ಅರ್ಜುನ್‌ ಅವರ ಮೃತದೇಹವೆಂದು ಸ್ಪಷ್ಟಪಡಿಸಿರುವುದಾಗಿ ವರದಿ ವಿವರಿಸಿದೆ.‌

ಇವರ ಜೊತೆ ಸ್ಥಳೀಯ ಜಗನ್ನಾಥ ಮತ್ತು ಲೋಕೇಶ್ ಕಣ್ಮರೆಯಾಗಿದ್ದಾರೆ ಆಗಿದ್ದು ಅವರ ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು  

Advertisement

ಬೆಂಜ್ ಲಾರಿಯ ಕ್ಯಾಬಿನ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಲಾರಿಯಲ್ಲಿಯೇ ಅರ್ಜುನ್ ದೇಹ ಸಿಲುಕಿಕೊಂಡಿದ್ದು ದೇಹವು ಸಂಪೂರ್ಣವಾಗಿ ಅಪಚ್ಚಿಯಾಗಿದೆ. ಅರ್ಜುನ್ ದೇಹ ಸಂಪೂರ್ಣ ಹೋಗಿ ಮೂಳೆ ದೊರೆತಿದ್ದು ಆತ ಧರಿಸಿದ ಪ್ಯಾಂಟ್ ಮೂಳೆಗೆ ಸಿಲಿಕಿತ್ತು. ಮೂಳೆಯನ್ನು ಮರಣೋತ್ತರ ಪರೀಕ್ಷೆಗೆ ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ.

ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗಂಗಾವಳಿ ನದಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಸಹಿತ ಕೆಲ ವಾಹನಗಳು ಮುಳುಗಿದ್ದವು. ಇದರಲ್ಲಿ ಕೆಲ ವಾಹನಗಳ ಅವಶೇಷಗಳು ಪತ್ತೆಯಾಗಿದ್ದವು. ಆದರೆ ಅರ್ಜುನ್‌ ಹಾಗೂ ಲಾರಿಯ ಸುಳಿವು ಸಿಕ್ಕಿರಲಿಲ್ಲ. ಈ ಕಾರ್ಯಾಚರಣೆಗೆ ಈಶ್ವರ್‌ ಮಲ್ಪೆ ಸೇರಿದಂತೆ ಹಲವು ತಂಡ ಕಾರ್ಯಾಚರಣೆ ನಡೆಸಿದ್ದವು.

ಕಳೆದ ಆರು ದಿನಗಳಿಂದ ನಾನು ಇಲ್ಲೇ ಇದ್ದು ಕಾರ್ಯಾಚರಣೆ  ನೋಡುತ್ತಿದ್ದು, ಚಾಲಕ ಅರ್ಜುನ್‌ ಅವರು ಮರಳಿ ಬರುವುದಿಲ್ಲ ಎಂಬುವುದು ಗೊತ್ತಿತ್ತು.  ಆದರೆ ಕೊನೆಯ ಪಕ್ಷ ಅವಶೇಷವಾದರೂ ದೊರಕಬಹುದು ಎಂಬ ನಿರೀಕ್ಷೆ ನಮ್ಮದಾಗಿತ್ತು. ಅದು ನಿಜವಾಗಿದೆ ಎಂದು ಅವರ ಬಾವ ಜಿತಿನ್‌ (ಸಹೋದರಿ ಗಂಡ) ಪ್ರತಿಕ್ರಿಯೆ ನೀಡಿದ್ದಾರೆ.

ಅರ್ಜುನ್‌ ಅವರ ಜತೆ ಮತ್ತೊಬ್ಬರ ಮೃತದೇಹವೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಜು.16ರಂದು ಭೀಕರ ಮಳೆಯಿಂದ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 10 ಮಂದಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next