Advertisement

Shiroor Landslide: ಗಂಗಾವಳಿ ನದಿಯಲ್ಲಿ ಮತ್ತೆ ಶೋಧ ನಡೆಸಲಿರುವ ಈಶ್ವರ ಮಲ್ಪೆ

01:18 AM Aug 03, 2024 | Team Udayavani |

ಮಲ್ಪೆ: ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ನದಿಯ ನೀರಿನ ಹರಿವಿನ ಪ್ರಮಾಣ ಸಮುದ್ರದ ಉಬ್ಬರವನ್ನು ಅವಲಂಬಿಸಿ ಕೆಲವು ಸಲ ಇಳಿಮುಖಗೊಳ್ಳುವ ಸಾಧ್ಯತೆ ಇರುವುದರಿಂದ ಆ. 4ರ ಅಮಾವಾಸ್ಯೆಯಂದು ಈಶ್ವರ ಮಲ್ಪೆ ಅವರು ಅಂಕೋಲ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಮೃತದೇಹದ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

Advertisement

ಜು. 27ರಂದು 8 ಬಾರಿ, 28ರಂದು 2 ಸಲ ಸಹಿತ ಒಟ್ಟು 10 ಬಾರಿ ನೀರಿನಲ್ಲಿ ಶೋಧ ನಡೆಸಿರುವ ಈಶ್ವರ ಮಲ್ಪೆ ತಂಡಕ್ಕೆ ಮೃತದೇಹದ ಸುಳಿವು ಸಿಕ್ಕಿರಲಿಲ್ಲ. ಕೆಂಪು ಮಿಶ್ರಿತ ನೀರಿನಿಂದಾಗಿ ಪತ್ತೆ ಕಾರ್ಯಕ್ಕೆ ತೊಡಕಾಗಿತ್ತು. ಇದೇ ಕಾರಣದಿಂದ ಜಿಲ್ಲಾಡಳಿತ ಕೂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.

ಆ. 4ರಂದು ಮುಂಜಾನೆ 3 ಗಂಟೆಗೆ ಮಲ್ಪೆಯಿಂದ ತೆರಳಲಿದ್ದು, 7 ಗಂಟೆಗೆ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಈಶ್ವರ್‌ ಮಲ್ಪೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next