Advertisement

Shiroor Hill Slide:ಈಶ್ವರ ಮಲ್ಪೆ ತಂಡ, ಟಗ್ ಬೋಟ್ ಸಹಾಯದಿಂದ ಕಾರ್ಯಾಚರಣೆ:ಜಿಲ್ಲಾಧಿಕಾರಿ

01:41 PM Jul 27, 2024 | Team Udayavani |

ಅಂಕೋಲಾ: ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆ 12 ದಿನಕ್ಕೆ ಕಾಲಿಟ್ಟಿದ್ದು ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದ್ದು, ದಿನಕ್ಕೊಂದು ಹೊಸ-ಹೊಸ ತಂತ್ರಜ್ಞಾನ ಬಳಕೆ ಮಾಡಿ ಗಂಗಾವಳಿ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ.

Advertisement

ಜು.27ರ ಶನಿವಾರ ಕಾರ್ಯಾಚರಣೆಗೆ ಮುಳುಗುತಜ್ಞ ಈಶ್ವರ ಮಲ್ಪೆ ತಂಡ ಮತ್ತು ಟಗ್ ಬೋಟ್ ಸಹಾಯದಿಂದ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ.

ಮುಂಜಾನೆ ಕಾರ್ಯಾಚರಣೆ ಆರಂಭಕ್ಕೂ ಮುನ್ನ ಮಾಧ್ಯಮಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಈಗಾಗಲೇ ದೆಹಲಿಯ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಮತ್ತು ನೌಕಾದಳ, ಸೇನೆಯ ಮಾಹಿತಿ ಕಲೆ‌ ಹಾಕಿ ಲೋಹದ ಅಂಶ ಇರುವ ನಾಲ್ಕು ಸ್ಥಳ ಗುರುತಿಸಿ ಅಲ್ಲಿ ಮುಳುಗು ತಜ್ಞರಿಂದ ಕಾರ್ಯಾಚರಣೆ ನಡೆಯಲಿದೆ. ಮಧ್ಯಾಹ್ನದ ಹೊತ್ತಿಗೆ ಟಗ್ ಬೋಟ್ ಸ್ಥಳಕ್ಕೆ ಆಗಮಿಸಲಿದ್ದು‌, ಆ ನಂತರ ಕಾರ್ಯಾಚರಣೆ ಆರಂಭ ಮಾಡಲಾಗುವುದು ಎಂದರು.

ಕೇರಳ ರಾಜ್ಯದ ಸಚಿವರ ಮತ್ತು ಶಾಸಕರ ದಂಡು ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಜು.27ರ ಶನಿವಾರ ಲೋಕೋಪಯೋಗಿ ಸಚಿವ ರಿಯಾಜ ಅಹ್ಮದ್, ಅರಣ್ಯ ಇಲಾಖೆ ಸಚಿವ ಏ.ಕೆ. ಶಶಿಂದ್ರ, ಕಲ್ಲೆಶಿರಿ ಶಾಸಕ ಬಿಜೀನ ಮಂಜೇಶ್ವರ ಶಾಸಕ ಆಶ್ರಪ್, ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next