ಪುಣೆ: ಶಿರಡಿಯ ಶ್ರೀ ಸಾಯಿಬಾಬಾ ದೇವಸ್ಥಾನ ಟ್ರಸ್ಟ್ ಗೆ ಕಳೆದ ಮೂರು ವರ್ಷಗಳಲ್ಲಿ ವಿಧಿಸಲಾದ 175 ಕೋಟಿ ರೂ. ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಅದರ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ವಿನಾಯಿತಿ ನೀಡಲಾಗಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.
”2015-16ನೇ ಸಾಲಿನ ತೆರಿಗೆಯನ್ನು ನಿರ್ಣಯಿಸುವಾಗ ಆದಾಯ ತೆರಿಗೆ ಇಲಾಖೆಯು ಶ್ರೀ ಸಾಯಿಬಾಬಾ ಸಂಸ್ಥಾನವು ಧಾರ್ಮಿಕ ಟ್ರಸ್ಟ್ ಅಲ್ಲ, ಚಾರಿಟಬಲ್ ಟ್ರಸ್ಟ್ ಎಂದು ಭಾವಿಸಿ, ದೇಣಿಗೆ ಪೆಟ್ಟಿಗೆಯಲ್ಲಿ ಪಡೆದ ದೇಣಿಗೆಗೆ ಶೇಕಡಾ 30 ರಷ್ಟು ಆದಾಯ ತೆರಿಗೆ ವಿಧಿಸಿ, 183 ಕೋಟಿ ರೂ. ತೆರಿಗೆ ಪಾವತಿಗೆ ಸೂಚನೆ ನೀಡಲಾಗಿದೆ ಎಂದು ಅದು ಹೇಳಿದೆ.
ನಂತರ ಟ್ರಸ್ಟ್ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದೆ. ಸುಪ್ರೀಂ ‘ತೆರಿಗೆ ಬಗ್ಗೆ ನಿರ್ಧರಿಸುವವರೆಗೆ ಪಾವತಿಸಬೇಕಾದ ತೆರಿಗೆಗೆ ತಡೆಯಾಜ್ಞೆ ನೀಡಿದೆ” ಎಂದು ಅದು ಹೇಳಿದೆ.
ಇದನ್ನೂ ಓದಿ:ಟೊಯೊಟಾ ಇನ್ನೋವಾ ಹೈಕ್ರಾಸ್ ಭಾರತದ ಮಾರುಕಟ್ಟೆಗೆ : ಜನವರಿಯಿಂದಲೇ ಡೆಲಿವರಿ ಶುರು
ಆದಾಯ ತೆರಿಗೆ ಇಲಾಖೆಯು ಅಂತಿಮವಾಗಿ ಸಾಯಿಬಾಬಾ ಸಂಸ್ಥಾನವನ್ನು ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ಆಗಿ ಸ್ವೀಕರಿಸುವ ಮೂಲಕ ಡೋನೇಶನ್ ಬಾಕ್ಸ್ ನಲ್ಲಿ ಸಂಗ್ರಹವಾದ ದೇಣಿಗೆಗೆ ವಿಧಿಸುವ ತೆರಿಗೆಯಿಂದ ವಿನಾಯಿತಿ ನೀಡಿತು.
ಹೀಗಾಗಿ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಕಳೆದ ಮೂರು ವರ್ಷಗಳಲ್ಲಿ ವಿಧಿಸಲಾಗಿದ್ದ 175 ಕೋಟಿ ರೂಪಾಯಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.