Advertisement

ಪಂಪನ ಸುತ್ತಮುತ್ತ ವಿಚಾರಗೋಷ್ಠಿ

05:35 PM Oct 10, 2018 | Team Udayavani |

ಶಿರಸಿ: ಆದಿಕವಿ ಪಂಪ ಹಾಡಿ ಹೊಗಳಿದ ಬನವಾಸಿಯಲ್ಲಿ ಪಂಪ ಮಹಾಕವಿ ಸುತ್ತ ಮುತ್ತ ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ ಅ.13 ರಂದು ಬೆಳಗ್ಗೆ 10:30ಕ್ಕೆ ಸ್ಥಳೀಯ ಮಧುಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ರಾಜ್ಯ ಚುಸಾಪ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದರು.

Advertisement

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌, ಕದಂಬ ಸೈನ್ಯ, ಮಧುಕೇಶ್ವರ ದೇವಸ್ಥಾನದ ಸಹಕಾರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶಾಸಕ ಶಿವರಾಮ ಹೆಬ್ಟಾರ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ, ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ದೇವಸ್ಥಾನದ ಅಧ್ಯಕ್ಷ ರಾಜಶೇಖರ ವಸ್ತ್ರದ ಪಾಲ್ಗೊಳ್ಳುವರು. ಉದ್ಘಾಟನಾ ಸಮಾರಂಭದಲ್ಲಿ ಕಾಸರಕೋಡಿನಿಂದ ಉತ್ತರ ಕನ್ನಡದ ತನಕ ಇರುವ ಚುಟುಕು ಕವಿಗಳ ಸಂಕಲನ ಚುಟುಕು ಗಂಗಾವಳಿ ಹಾಗೂ ಡಾ| ಜಿ.ಎ. ಹೆಗಡೆ ಸೋಂದಾ ಅವರ ಹೈಕುಗಳು ಕೃತಿ ಬಿಡುಗಡೆ ಆಗಲಿದೆ.

ವಿಚಾರ ಗೋಷ್ಠಿ ಆಶಯ ಭಾಷಣವನ್ನು ಡಾ| ಶಾಂತಿನಾಥ ದಿಬ್ಬಣ ಮಾಡಲಿದ್ದು, ಶ್ರೀಕೃಷ್ಣ ಜೋಶಿ ಅಧ್ಯಕ್ಷತೆ ವಹಿಸುವರು. ಡಾ| ಎಸ್‌.ಪಿ. ಪದ್ಮನಾಭ, ಡಾ| ಶ್ರೀಪಾದ ಶೆಟ್ಟ, ವಿ.ಆರ್‌. ಜೋಶಿ ಕುಮಟಾ, ಜನಾರ್ಧನ ನಾಯಕ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 2ಕ್ಕೆ ಯಕ್ಷ ಶುಭೋದಯ ತಂಡದಿಂದ ತಾಳಮದ್ದಲೆ, 4ಕ್ಕೆ ಚುಟುಕು ವಾಚನ ಗೋಷ್ಠಿ, ಸಮಾರೋಪ ಸಮಾರಂಭ ಸಂಜೆ 5ಕ್ಕೆ ಜರುಗಲಿದೆ. ಶಿವಣ್ಣ ಬೆಲ್ಲದ ಅಧ್ಯಕ್ಷತೆ ವಹಿಸುವರು. ರಾಜೀವ ಆಚಾರ್‌, ಧರಣೇಂದ್ರ ಕುರಕುರಿ, ಮನೋಹರ ಮಲ್ಮನೆ, ಉದಯ ಕಾನಳ್ಳಿ, ಶಿವಾನಂದ ದೀಕ್ಷಿತ, ಶ್ರೀಲತಾ ಕಾಳೇರಮನೆ, ಜಿ.ಯು. ನಾಯಕ ಪಾಲ್ಗೊಳ್ಳುವರು ಎಂದು ತಿಳಿಸಿದರು. ಡಾ| ಜಿ.ಎ. ಹೆಗಡೆ ಸೋಂದಾ, ಉದಯಕುಮಾರ ಕಾನಳ್ಳಿ, ಜಿ.ಯು. ನಾಯಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next