Advertisement

ಹಲಸಿನ ಮೌಲ್ಯವರ್ಧನೆಗೆ ದಿಟ್ಟಹೆಜ್ಜೆ; ರೈತರು ಖುಷ್‌

05:24 PM May 24, 2022 | Team Udayavani |

ಶಿರಸಿ: ಜಿಲ್ಲೆಯಲ್ಲಿ ನೀರಾ ಸಂಗ್ರಹಣೆಗೆ ಮುಂದಡಿಯಿಟ್ಟಿರುವಏಕೈಕ ಸಂಸ್ಥೆಯಾದ ಶಿರಸಿಯ ನೆಲಸಿರಿ ರೈತ ಉತ್ಪಾದಕ ಕಂಪನಿಹಲಸು ಮತ್ತು ಬಾಳೆ ಬೆಳೆಯ ಮೌಲ್ಯವರ್ಧನೆಯಲ್ಲೂ ಹೊಸಛಾಪು ಮೂಡಿಸುತ್ತಿದೆ.

Advertisement

ನಬಾರ್ಡ್‌ ನ ವಿಶೇಷ ಯೋಜನೆಯ ಆರ್ಥಿಕ ಸಹಕಾರದಲ್ಲಿಈ ಎರಡು ಉಪಬೆಳೆಗಳ ಮೌಲ್ಯವರ್ಧನೆಗಾಗಿ ಯೋಜನೆರೂಪಿಸಿದ್ದು ಇನ್ನು ಕೆಲ ದಿನಗಳಲ್ಲಿ ಸುಸಜ್ಜಿತ ಸಂಸ್ಕರಣಾಘಟಕವನ್ನು ಸ್ಥಾಪಿಸಲಿದೆ. ಈ ಘಟಕದಲ್ಲಿ ಸೋಲಾರ್‌ ಹಾಗೂವಿದ್ಯುತ್‌ ಚಾಲಿತ ಡೈÅಯರ್‌ಗಳು, ಚಿಪ್ಸ್‌ ಕಟಿಂಗ್‌ ಯಂತ್ರ,ಹಿಟ್ಟು ಮಾಡುವ ಯಂತ್ರ ಇತ್ಯಾದಿ ಯಂತ್ರೋಪಕರಣಗಳುಕಾರ್ಯನಿರ್ವಹಿಸಲಿವೆ.

ಇದಕ್ಕೆ ಪೂರಕವಾಗಿ ಈಗಾಗಲೇರೈತರಿಂದ ಬಿಡಿಸಿದ ಹಲಸಿನ ಸೊಳೆಗಳನ್ನು ಖರೀದಿಸುತ್ತಿದ್ದುವ್ಯರ್ಥವಾಗುತ್ತಿದ್ದ ಹಲಸಿನಿಂದಲೂ ಆದಾಯ ಗಳಿಸುವಸಾಧ್ಯತೆಗಳನ್ನು ಹೆಚ್ಚಿಸಿದೆ.ಸೂಕ್ತವಾಗಿ ಬೆಳೆದಿರುವ ಸ್ವಲ್ಪವೂ ಹಣ್ಣಾಗದ ಯಾವುದೇಜಾತಿಯ ಹಲಸಿನ ಸೊಳೆಗಳನ್ನು ಶುದ್ಧವಾಗಿ ಬೇರ್ಪಡಿಸಿಕಾಯಿ ಕೊಯ್ದ ದಿನವೇ ಮಧ್ಯಾಹ್ನ 1.30 ರ ಒಳಗೆ ತಂದಲ್ಲಿಕೆಜಿಗೆ 100 ರೂ. ನೀಡಿ ಖರೀದಿಸುತ್ತಿದೆ.

ಹೀಗೆ ಖರೀದಿಸಿದಸೊಳೆಯನ್ನು ಚಿಪ್ಸ್‌, ಹಪ್ಪಳ ಇತ್ಯಾದಿ ಮೌಲ್ಯವ ರ್ಧಿತಉತ್ಪನ್ನಗಳ ತಯಾರಿಕೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಮುಂದಿನದಿನಗಳಲ್ಲಿ ಉತ್ತಮ ಜಾತಿಯ ಬಕ್ಕೆ ಹಣ್ಣು , ಹಲಸಿನಬೀಜವನ್ನೂ ಖರೀದಿಸಲು ಕಂಪನಿ ನಿರ್ಧರಿಸಿದೆ. ಕಳೆದಎರಡು ದಿನಗಳಿಂದ ಕ್ವಿಂಟಾಲ್‌ನಷ್ಟು ಹಲಸಿನ ಸೊಳೆಯನ್ನುಕದಂಬ ಖರೀದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next