ಶಿರಸಿ: ಸಂಶೋದಕ ಸುಳ್ಳನ್ನು ಹೇಳಬಾರದು. ಸತ್ಯವನ್ನು ಅನ್ವೇಷಣೆ ಮಾಡಬೇಕು. ಸಂಶೋಧನೆ ಪದವಿಗಾಗಿ ಮಾಡುವ ಯಾಂತ್ರಿಕ ಕೆಲಸವಲ್ಲ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ ವಸಂತಕುಮಾರ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಸೋದೆ ಮಠದಲ್ಲಿ ಅಕಾಡೆಮಿ ಹಮ್ಮಿಕೊಂಡ ಐದು ದಿನಗಳ ರಾಷ್ಟ್ರಮಟ್ಟದ ಸಂಶೋಧನಾ ಕಮ್ಮಟದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಷ್ಟದ ಜೀವನ ನಡೆಸುವವರೇ ನಿಜವಾದ ಸಂಶೋಧಕರು.ಮನುಷ್ಯನ ಬದುಕನ್ನ ಸುಂದರ ಗೊಳಿಸಿದ ಸಂಶೋಧನೆ ವ್ಯರ್ಥ ಸಂಶೋಧನೆ ಅನ್ನಿಸಿಗೊಳ್ಳುತ್ತದೆ. ಪರಂಪರೆಯ ನೀರನ್ನು ಮುಂದಿನ ತಲೆಮಾರಿಗೆ ಹರಿಸುವುದಕ್ಕೆ ಸಾಹಿತ್ಯ ಅಕಾಡೆಮಿ ಇಂತಹ ಕಮ್ಮಟಗಳನ್ನು ಆಯೋಜಿಸುತ್ತಿದೆ. ನಗರಗಳು ಟೋಳ್ಳಾದಾಗ ಅದಕ್ಕೆ ಶಕ್ತಿ ತುಂಬುವ ಕೆಲಸ ಪರಿಸರ ಮಾಡುತ್ತದೆ ಎಂದರು.
ಹಿರಿಯ ಸಾಹಿತಿ ಎನ್.ಅರ್. ನಾಯಕ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.
ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಆಶೀರ್ವಚನ ನುಡಿದು,ಪ್ರತಿಯೊಬ್ಬರೂ ಕನ್ನಡ ಭಾಷೆ ಯನ್ನು ಬಳಸಬೇಕು ಜೊತೆಗೆ ಬೆಳೆಸಬೇಕು. ಪ್ರತಿಯೊಬ್ಬರಲ್ಲೂ ಒಬ್ಬ ಸಂಶೋಧಕ ಇರುತ್ತಾನೆ.ಅದನ್ನು ಹೊರತೆಗೆಯುವ ಕೆಲಸ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಸಂಶೋಧನೆ ಗಳಲ್ಲಿ ಸತ್ಯತೆ ಇರಬೇಕು. ಸಂಶೋಧಕ ನಿಧಾನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಸತ್ಯವನ್ನಾದರೂ ಪರಿಗಣಿಸಿಯೇ ಒಪ್ಪಿಕೊಳ್ಳಬೇಕು. ಜೀವನ ಅತೀ ಚಿಕ್ಕದು. ಸತ್ಯತೆಯನ್ನು ಹುಡುಕಬೇಕು. ಶರೀರವೇ ಶಾಶ್ವತವಲ್ಲ ಅಂದ್ಮೇಲೆ ಹಣ ಅಂತಸ್ತು ವೈಭೋಗ ಶಾಶ್ವತವಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಧರ್ಮವನ್ನು ಸಂಗ್ರಹಮಾಡುವ ಕಾರ್ಯ ನಾವು ಮಾಡಬೇಕು. ಎಂದರು.
ಶಿಬಿರ ನಿರ್ದೇಶಕ ಶಿವಾರೆಡ್ಡಿ, ಚಿತ್ತಯ್ಯ ಪೂಜಾರ್ , ಶುಭಾ ಮರವಂತೆ, ಜಿನದತ್ತ ಹಡಗಲಿ, ದತ್ತಗುರು ಹೆಗಡೆ ಬುಳ್ಳಿ
ರಿಜಿಸ್ಟ್ರಾರ್ ಕರಿಯಪ್ಪ ಎನ್ ಸೇರಿ ಹಲವರು ಉಪಸ್ಥಿತರಿದ್ದರು.