Advertisement

Sirsi: ಬರಗಾಲ ಕುರಿತು ಶಾಸಕ ಭೀಮಣ್ಣ‌ ನಾಯ್ಕ ಸಭೆ‌

05:02 PM Nov 16, 2023 | Team Udayavani |

ಶಿರಸಿ: ತಾಲೂಕಿನಲ್ಲಿ ಜನ ಜಾನುವಾರುಗಳಿಗೆ ಯಾವುದೇ ರೀತಿಯಲ್ಲೂ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು, ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಭೀಮಣ್ಣ‌ ನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಅವರು ಗುರುವಾರ ನಗರದ‌ ಮಿನಿ ವಿಧಾನ ಸೌಧಲ್ಲಿ ಬರದ ನಿರ್ವಹಣಾ ಸಿದ್ಧತೆ ಹಿನ್ನಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ‌ ಮಾತನಾಡಿದರು‌.

ಶಿರಸಿಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಯಾವುದೇ ಸಮಸ್ಯೆ ಆಗಬಾರದು. ಜೆಜೆಎಂಎಲ್ 116 ಕಾಮಗಾರಿಗಳು ಕೂಡ ಬೇಗ ಸರಿ ಮಾಡಿಕೊಡಬೇಕು. ಪ್ರತಿ ಯೋಜನೆಯಲ್ಲೂ ಒಂದು ಹೆಚ್ಚುವರಿ ನೀರಿನ ಮೂಲ ಮಾಡಬೇಕಿದೆ ಎಂದರು.

ಅಭಿಯಂತ ಅರುಣಕುಮಾರ ಮಾತನಾಡಿ, 48 ಪೂರ್ಣವಾಗಿದೆ. ಮೂರು ಹಸ್ತಾಂತರ ಆಗಬೇಕು. ಇನ್ನೂ 22 ಕಾಮಗಾರಿ ಆಗಬೇಕಿದೆ ಎಂದರು. ತಾಲೂಕು ಪಂಚಾಯತ್‌ ಇಓ ಸತೀಶ ಹೆಗಡೆ 205 ಮಜರೆಯಲ್ಲಿ ನೀರಿ‌ನ ಕೊರತೆ ಆಗುವ ಸಾಧ್ಯತೆ ಇದೆ. ಹೊಸ ಬೋರ್ ವೆಲ್ ಪ್ರಸ್ತಾಪ ಕೂಡ ಪಡೆದುಕೊಂಡು ಗುರುತು ಹಾಕುತ್ತಿದ್ದೇವೆ ಎಂದರು.

ಇದನ್ನೂ ಓದಿ: Dog bite: ತಿಂಗಳಲ್ಲೇ 500ಕ್ಕೂ ಹೆಚ್ಚು ಮಂದಿಗೆ ನಾಯಿ ಕಡಿತ

Advertisement

ಪೌರಾಯುಕ್ತ ಕಾಂತರಾಜ, 26 ರಲ್ಲಿ 15 ಬೋರವೆಲ್ ಸರಿ ಇದೆ. 11 ದುರಸ್ತಿ ಮಾಡುತ್ತಿದ್ದೇವೆ. ಡಿಸೆಂಬರ್ ತನಕ‌ ನಿತ್ಯ ನೀರು ಕೊಡಲಿದ್ದೇವೆ. ಫೆಬ್ರುವರಿಯಲ್ಲಿ ದಿನ ಬಿಟ್ಟು ದಿನ ಕೊಡುವುದಾಗಿ ಹೇಳಿದಾಗ ಪ್ರತಿಕ್ರಿಯೆ ನೀಡಿದ ಭೀಮಣ್ಣ, ನಿತ್ಯ ನೀರು‌ ಕೊಡಬೇಕು ಎಂದರು.

ಮಾರಿಗದ್ದೆ ಹಾಗೂ ಕೆಂಗ್ರೆಯಿಂದ‌ ನಗರಕ್ಕೆ ಡಿಸೆಂಬರ್ ತನಕ‌ ನೀರು ಸಾಕಾಗಬಹುದು, 20 ಬೋರ್ ವೆಲ್ ಹೆಚ್ಚುವರಿ ಬೇಕಿದ್ದು, 70 ಲ.ರೂ.ಬೇಕಾಗಬಹುದು ಎಂದು ಮಾಹಿತಿ ನಗರಸಭೆ ಅಧಿಕಾರಿಗಳು ತಿಳಿಸಿದರು.

ಹಣದ ಕೊರತೆ ಆಗುವದಿಲ್ಲ. ಆದರೆ, ಜಲ‌ಮೂಲ ನೋಡಿ ಪ್ರಸ್ತಾವನೆ, ಬಾಕಿ ಉಳಿದ‌ ಕಾಮಗಾರಿ ಪೂರ್ಣ ಮಾಡಬೇಕು ಎಂದು ಭೀಮಣ್ಣ ಸೂಚಿಸಿದರು‌. ತಹಸೀಲ್ದಾರ ಶ್ರೀಧರ ಮುಂದಲಮನಿ ಇತರರು ಇದ್ದರು‌.

Advertisement

Udayavani is now on Telegram. Click here to join our channel and stay updated with the latest news.

Next