Advertisement

ರೈತರ ಮಹಸೂಲು ಶೇಖರಿಸುವ ಗೋದಾಮು ಉದ್ಘಾಟನೆ 

05:30 PM Mar 25, 2019 | Team Udayavani |
ಶಿರಸಿ: ರೈತರಪರ ಸದಾ ಕಾಳಜಿ ಹೊಂದಿರುವ ದಿ ತೋಟಗಾರ್ಸ್‌ ಕೋ-ಆಪರೇಟಿವ್‌ ಸೇಲ್‌ ಸೊಸೈಟಿ ತನ್ನ ಸದಸ್ಯರು ಸಂಘಕ್ಕೆ ತರುವ ಮಹಸೂಲುಗಳನ್ನು ಶಿಲ್ಕು ಇರಿಸಿಕೊಳ್ಳುವ ಸಲುವಾಗಿ ನಿರ್ಮಿಸಿರುವ ಬೃಹತ್‌ ಗೋದಾಮನ್ನು ಸಂಘದ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಉದ್ಘಾಟಿಸಿದರು.
ಬಳಿಕ ಶೀಗೇಹಳ್ಳಿ ಮಾತನಾಡಿ, ಗೋದಾಮು ಇನ್ನು ಮುಂದೆ ರೈತರು ತರುವ ಮಹಸೂಲುಗಳನ್ನು ಶಿಲ್ಕು ಇಡಲು ಅನುಕೂಲ ಆಗಲಿದೆ. ಜೊತೆ ಸಂಘದ ಸಿಹಿ ಅಡಕೆ ಪುಡಿ ತಯಾರಿಕಾ ಘಟಕದ ಪಕ್ಕದಲ್ಲಿ ನೂತನವಾಗಿ 21 ಸಾವಿರ ಚದರ ಅಡಿ ಸಾಮರ್ಥ್ಯದ ಗೋದಾಮನ್ನು ನಿರ್ಮಿಸಲಾಗಿದ್ದು, ಅಲ್ಲೂ 10, ಸಾವಿರ ಅಡಕೆ ಚೀಲಗಳನ್ನು ಸಂಗ್ರಹಿಸಬಹುದಾಗಿದೆ. ಈ ಗೋದಾಮು ನಿರ್ಮಾಣದಿಂದಾಗಿ ಸದಸ್ಯರ ಮಹಸೂಲುಗಳನ್ನು ಶಿಲ್ಕು ಮಾಡಲು ಇದ್ದ ಚಿಕ್ಕಪುಟ್ಟ ಅಡಚಣೆಗಳು ಬಗೆಹರಿದಂತಾಗಿದೆ ಎಂದರು.
ಇದೂ ಅಲ್ಲದೇ ಈವರೆಗೆ ಅನಿವಾರ್ಯವಾಗಿದ್ದ ಖಾಸಗಿ ಗೋದಾಮುಗಳ ಅವಲಂಬನೆ ಸಹ ಕಡಿಮೆಯಾದಂತಾಗಿದೆ. ಈ ಮೂಲಕವಾಗಿ ಸದಸ್ಯರಿಗೆ ಯಾವ ಆತಂಕವಿಲ್ಲದೆ ಸುರಕ್ಷಿತ ಶಿಲ್ಕು ಮಾಡಲು ವಿಶಾಲವಾದ ಅವಕಾಶ ದೊರೆತಿದೆ. ಸಂಘದ ಸದಸ್ಯರು ಹಾಗೂ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿಕೊಂಡರು. ಸಂಘದ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಆಡಳಿತ ಮಂಡಳಿ ಸದಸ್ಯ ಶಶಾಂಕ ಹೆಗಡೆ, ಇತರರು ಹಾಗೂ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಗೋದಾಮು ನಿರ್ಮಾಣ ಕಾಮಗಾರಿ ಮಾಡಿರುವ ಸಿವಿಲ್‌ ಇಂಜಿನೀಯರ್‌ ವಿ.ಎನ್‌. ಹೆಗಡೆ ಇತರರು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next