Advertisement

ವ್ಯಕ್ತಿ ಅಭಿಮಾನ ಮನೆಯಲ್ಲಿಟ್ಟುಕೊಳ್ಳಿ

04:08 PM Sep 19, 2019 | Naveen |

ಶಿರಸಿ: ಗ್ರಾಪಂ ಸದಸ್ಯನಿಂದ ಸಂಸದನಾಗುವ ತನಕ ಯಾವುದೇ ಜನಪ್ರತಿನಿಧಿಗೆ ಟಿಕೆಟ್, ಪಕ್ಷದಲ್ಲಿನ ಯಾವುದೇ ಹುದ್ದೆ ಬೇಕಿದ್ದರೂ ಪ್ರತಿಯೊಬ್ಬರೂ ಕಾರ್ಯಕರ್ತನ ಮನೆ ಬಾಗಿಲಿಗೆ ತೆರಳಿರಬೇಕು. ಕನಿಷ್ಠ 25 ಸದಸ್ಯರ ಸದಸ್ಯತ್ವ ಪಕ್ಷಕ್ಕಾಗಿ ಮಾಡಿಸಿರಬೇಕು. ಉಳಿದ ಪಕ್ಷಗಳಂತೆ ಟಯರ್‌ ಸುಟ್ಟರೆ, ಬಸ್ಸಿಗೆ ಕಲ್ಲು ಒಗೆದರೆ ಟಿಕೆಟ್ ಕೊಡುವುದಿಲ್ಲ. ಅಂಥ ಅಭಿಮಾನ ಮನೆಯೊಳಗೆ ಇಟ್ಟುಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್ ಸ್ಪಷ್ಟಪಡಿಸಿದರು.

Advertisement

ಅವರು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಬಿಜೆಪಿ ತತ್ವ ಸಿದ್ಧಾಂತದ ಪಕ್ಷ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್‌ ಷಾ ಅವರೇ ಪಕ್ಷದ ಕಾರ್ಯಕರ್ತನ ಮನೆಗೆ ತೆರಳಿ ಸಂಘಟನೆ ಮಾಡುತ್ತಾರೆ ಎಂದರೆ, ಶಾಸಕರು, ಸಂಸದರು, ಜಿಪಂ, ತಾಪಂ, ಗ್ರಾಪಂ, ನಮ್ಮ ಶಕ್ತಿ ಕೇಂದ್ರದ ಅಧ್ಯಕ್ಷರು ಮನೆ ಮನೆಗೆ ತೆರಳಿ ಅಭಿಯಾನ ಮಾಡಲು ಆಗದುವದಿಲ್ಲವಾ? ಬೆಳೆಯಬೇಕು ಎಂಬ ಆಶಯ ಇದ್ದವರು ಈ ಕೆಲಸ ಮಾಡಲೇಬೇಕು. ನಾನೂ ಇದನ್ನು ಬಿಟ್ಟು ಹೋಗುವುದಿಲ್ಲ. ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲೂ ಹಿಂದೇಟು ಹಾಕುವುದಿಲ್ಲ. ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ಧಾಂತವಿದೆ ಎಂದೂ ಹೇಳಿದರು.

ಕೇವಲ ದೇಶದ ಅಧಿಕಾರ ನಡೆಸಲು ಸೋನಿಯಾಗಾಂಧಿ ಅಥವಾ ಮನಮೋಹನ ಸಿಂಗ್‌ ಅವರಿದ್ದರೆ ಸಾಕು. ಆದರೆ ನಮ್ಮ ದೇಶ ಅಭಿವೃದ್ಧಿ ಕಾಣಲು, ರಾಮರಾಜ್ಯವಾಗಲು, ಪರಿವರ್ತನೆ ಹೊಂದಲು, ಜಗತ್‌ ವಂದ್ಯ ಭಾರತವಾಗಲು ನರೇದ್ರ ಮೋದಿ ಅವರಂಥವರೇ ಬೇಕು. ಸಿದ್ದರಾಯಮ್ಯ ವಿಲನ್‌ ಆದರು. ಕುಮಾರಸ್ವಾಮಿ ಅವರು ಪಾರ್ಟ್‌ ಟೈಮ್‌ ಸಿಎಂ ಆಗಿ ಕಾರ್ಯ ನಿರ್ವಹಿಸಿದರು. ಕಾಂಗ್ರೆಸ್‌ ಹೀನ ಸರಕಾರದಿಂದ ಜನ ಬೇಸತ್ತಿದ್ದು ಈಗ ನನಮ್ಮನ್ನು ಅಭಿವೃದ್ಧಿಗೆ ಪ್ರೇರೇಪಿಸಿದ್ದಾರೆ ಎಂದರು.

ಅತಿವೃಷ್ಠಿಹಾನಿಗೆ ಕೇಂದ್ರ ಸರಕಾರ ಪರಿಹಾರ ಏನನ್ನೂ ಕೊಟ್ಟಿಲ್ಲ ಎನ್ನುವವರು ಅವರ ಅವಧಿಯಲ್ಲಿ ಏನು ಮಾಡಿದ್ದರು ಎಂದು ಬಿಚ್ಚಿ ಇಡಬೇಕಾ? ನಮ್ಮ ಕೇಂದ್ರ ಸರಕಾರ ಕೊಡುವಷ್ಟು ಕೊಟ್ಟೇ ಕೊಡುತ್ತದೆ ಎಂದೂ ಹೇಳಿದ ಅವರು, ಕೇಳಿದ್ದನ್ನು ಕೊಡುವ ಕಾಮಧೇನು ಮುಖ್ಯಮಂತ್ರಿ ಯಡಿಯೂರಪ್ಪನವರು ಇರುವಾಗ ರಾಜ್ಯದ ಜನತೆ ಯಾರೂ ಕೂಡಾ ಕಣ್ಣೀರಿಡುವುದು ಬೇಡ. ನಾವು ಅಭಿವೃದ್ಧಿಯನ್ನೇ ಬಯಸಿದವರು ಅಧಿಕಾರವನ್ನಲ್ಲ. ಆದ್ದರಿಂದ ಯಾರೂ ಹೆದರುವ ಅವಶ್ಯಕತೆಯೂ ಇಲ್ಲ ಎಂದೂ ವಿವರಿಸಿದರು.

Advertisement

ಹುಬಳ್ಳಿ ಮಹೇಶ ಟೆಂಗಿನಕಾಯಿ, ಶಾಸಕರಾದ ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ದಿನಕರ ಶಟ್ಟಿ, ಮಾಜಿ ಶಾಸಕರಾದ ಶಿವಾನಂದ ನಾಯ್ಕ, ವಿನೋದ ಪ್ರಭು, ವಿವೇಕಾನಂದ ವೈದ್ಯ, ಸುನಿಲ್ ಹೆಗಡೆ, ವಿ.ಎಸ್‌. ಪಾಟೀಲ್, ಗಂಗಾಧರ ಭಟ್, ಎಂ.ಜಿ. ನಾಯ್ಕ, ವಿನೋದ ಪ್ರಭು, ಕೃಷ್ಣ ಎಸಳೆ, ಆರ್‌.ವಿ. ಹೆಗಡೆ, ಗಣಪತಿ ನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next