ಶಿರಹಟ್ಟಿ: ಕನಕದಾಸರ ಜಯಂತಿಯನ್ನು ನ. 26ರಂದು ಅದ್ಧೂರಿಯಾಗಿ ಆಚರಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಈ ವರ್ಷವೂ ವಿಜೃಂಭಣೆಯಿಂದ ಜಯಂತಿ ಆಚರಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿದ್ದು, ಅದರಂತೆ ಎಲ್ಲ ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಲಿದ್ದಾರೆ ಎಂದು ತಹಶೀಲ್ದಾರ್ ಎ.ಡಿ. ಅಮರಾವದಗಿ ಹೇಳಿದರು.
ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತದ ವತಿಯಿಂದ ಭಕ್ತ ಕನಕದಾಸರ ಜಯಂತಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂದು ಬೆಳಗ್ಗೆ 10ಕ್ಕೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವುದರ ಮೂಲಕ ಮೆರವಣಿಗೆ ಪ್ರಾರಂಭವಾಗಲಿದೆ. ಪ್ರಮುಖ ವೃತಗಳಲ್ಲಿ ಸಂಚರಿಸಿ ಕನಕದಾಸರ ವೃತಕ್ಕೆ ಬಂದು ತಲಪುವುದು. ನಂತರ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು, ಸಂಘಟನೆ ಪದಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿ ಅರಿತುಕೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವುದರ ಮೂಲಕ ಭಕ್ತ ಕನಕದಾಸರ ಜಯಂತಿ ಯಶಸ್ವಿಗೊಳಿಸಬೇಕೆಂದು ಅಮರಾವದಗಿ ಹೇಳಿದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಮಂಜುನಾಥ ಘಂಟಿ, ಸಂತೋಷ ಕುರಿ, ಗೂಳಪ್ಪ ಕರಿಗಾರ, ಸೋಮನಗೌಡ ಮರಿಗೌಡ್ರ, ಫಕ್ಕೀರೇಶ ರಟ್ಟಹಳ್ಳಿ, ಪರಶುರಾಮ ಡೊಂಕಬಳ್ಳಿ, ದೇವಪ್ಪ ಬಟ್ಟೂರ, ಮಂಜು ಹಮ್ಮಿಗಿ, ಪ್ರವೀಣ ಹಾಲಪ್ಪನವರ, ಜಗದೇಶ ಇಟ್ಟೇಕಾರ, ಚಂದ್ರು ಜೋಗೆರ, ತಾಪಂ ಇಒ ಆರ್.ವೈ. ಗುರಿಕಾರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಸ್.ಬಿ. ಹರ್ತಿ, ಬಾಬುರಾವ್ ಜೋತಿ, ತೋಟಗಾರಿಕೆ ಅಧಿ ಕಾರಿ ಸುರೇಶ ಕುಂಬಾರ, ಕೃಷಿ ಅಧಿಕಾರಿ ಎಸ್.ಎನ್. ನರಸಮ್ಮನವರ, ಎಫ್.ಎಸ್. ನದಾಫ್ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಮುಳಗುಂದ ಪಟ್ಟಣದ ಕುರುಬಗೇರಿ ಓಣಿಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಪಟ್ಟಣದಲ್ಲಿ ಶ್ರದ್ಧಾಪೂರ್ವಕವಾಗಿ ಡಿ. 2ರಂದು ಆಚರಿಸಲು ಹಾಲುಮತ(ಕುರುಬ) ಸಮಾಜದ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಬಸವರಾಜ ನಿಂಬನಾಯ್ಕರ ಹಾಗೂ ಫಕೀರಯ್ಯ ಅಮೋಘಿಮಠ, ಕನಕದಾಸರ ಕೀರ್ತನೆಗಳ ಕುರಿತು ಈಗಾಗಲೇ ಶಾಲಾ ಮಕ್ಕಳಿಗಾಗಿ ಸ್ಪರ್ಧೆ ಏಪರ್ಡಿಸಲಾಗಿದೆ. ಜಯಂತಿಯನ್ನು ಡಿ. 2ರಂದು ಡೊಳ್ಳಿನ ಮೆರವಣಿಗೆ ಸೇರಿದಂತೆ ವಿವಿಧ ವಾಧ್ಯಗಳ ಮೂಲಕ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ನಂತರ ಸಂಜೆ ಸಭಾ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದರು. ಪಪಂ ಸದಸ್ಯ ಮಹಾಂತೇಶ ನೀಲಗುಂದ, ಮಲ್ಲಪ್ಪ ಕುಂದಗೋಳ, ಫಕೀರಪ್ಪ ಅಣ್ಣಿಗೇರಿ, ಬಸವರಾಜ ಕೋಳಿವಾಡ, ಫಕೀರೇಶ ಕಂಬಳಿ, ಗುರುಪಾದಪ್ಪ ಗೊರವರ, ಕುಬೇರಪ್ಪ ಗುಂಜಳ, ಹೋನ್ನಪ್ಪ ನೀಲಗುಂದ, ಹನಮಂತ ಕುಂದಗೋಳ, ಮಲ್ಲೇಶ ಕುಂದಗೋಳ, ರವಿ ಜೋಗಿ, ರಾಮಣ್ಣ ಪೂಜಾರ, ಮೋಹನ ನೀಲಗುಂದ, ಬಸವರಾಜ ಅಣ್ಣಿಗೇರಿ, ದೇವಪ್ಪ ಗುಡಿ, ದೇವಪ್ಪ ಲಕ್ಕುಂಡಿ, ಮಹಾಂತಪ್ಪ ಜಂಪಾಳಿ, ಯಲ್ಲಪ್ಪ ಶಿರಹಟ್ಟಿ, ಯಲ್ಲಪ್ಪ ಜಂಪಾಳಿ ಸೇರಿದಂತೆ ಇತರರು ಇದ್ದರು.