Advertisement

ಶಿರಹಟ್ಟಿ ಫಕ್ಕೀರೇಶ್ವರ ಶಾಖಾ ಮಠದ ಮಹಾ ರಥೋತ್ಸವ

04:34 PM May 30, 2019 | Naveen |

ಸವಣೂರು: ಕೋರಿಪೇಟೆಯಲ್ಲಿರುವ ಶಿರಹಟ್ಟಿ ಶ್ರೀ ಜಗದ್ಗುರು ಫಕ್ಕೀರೇಶ್ವರ ಸ್ವಾಮಿಗಳ ಶಾಖಾ ಮಠದ ಮಹಾ ರಥೋತ್ಸವ ಮಂಗಳವಾರ ಸಂಜೆ ಅಪಾರ ಭಕ್ತ ಸಮೂಹದ ಮಧ್ಯ ವೈಭವದಿಂದ ಜರುಗಿತು.

Advertisement

ಬೆಳಗ್ಗೆ ಫಕ್ಕೀರೇಶ್ವರ ಸ್ವಾಮೀಜಿ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು. ನಂತರ, ಆನೆಯು ಚೌರಿಯನ್ನು ಬಿಸುತ್ತಾ, ನಂದಿಕೋಲು ಕುಣಿತ, ಡೊಳ್ಳು, ಮಜಲು ಹಾಗೂ ನಗಾರಿಗಳೊಂದಿಗೆ ಜಗದ್ಗುರು ಫಕ್ಕೀರೇಶ್ವರ ಸ್ವಾಮೀಜಿಯವರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಹಾಗೂ ಕುಂದಗೋಳದ ತ್ರಿವಿಧ ದಾಸೋಹ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜ ಸ್ವಾಮೀಜಿ ಅವರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

ಸಂಜೆ ಅಪಾರ ಭಕ್ತ ಸಮೂಹ ಶ್ರೀ ಫಕ್ಕೀರೇಶ್ವರ ಸ್ವಾಮೀಜಿಯ ರಥೋತ್ಸವವನ್ನು ನೆರವೇರಿಸಿದರು. ಕೋರಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ದೊಡ್ಡಕೆರೆಯ ಪಾದಗಟ್ಟಿಗೆ ತಲುಪಿ ಪೂಜೆ ಸಲ್ಲಿಸಿ, ಮರಳಿ ದೇವಸ್ಥಾನಕ್ಕೆ ಬರುವ ಮೂಲಕ ಸಂಪನ್ನಗೊಂಡಿತು. ನಂತರ, ಶ್ರೀಗಳಿಂದ ಆಶೀರ್ವಚನ, ಶಿವ ಭಜನೆ, ಶಿವಕೀರ್ತನೆ, ಡೊಳ್ಳಿನ ಪದಗಳು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಫಕ್ಕೀರೇಶ್ವರ ಜಾತ್ರಾ ಸಮಿತಿ ಪದಾಧಿಕಾರಿಗಳು, ಪಟ್ಟಣದ ಮುಖಂಡರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತವೃಂದ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next