Advertisement

ದೋಟಿಹಾಳ: ಶಿರಗುಂಪಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭ ಯಾವಾಗ?

07:11 PM Feb 11, 2022 | Team Udayavani |

ದೋಟಿಹಾಳ: ದೇಶದ ಎಲ್ಲಾ ಗ್ರಾಮಗಳು ಬಯಲು ಶೌಚ ಮುಕ್ತವಾಗಬೇಕು, ಕಸ-ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿದೆ. ಇದರ ಅಡಿಯಲ್ಲಿ ಗ್ರಾಪಂಗಳಿಗೆ ಒಂದು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಗೆ ಸರಕಾರಗಳು ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ ಆದರೆ ಶಿರಗುಂಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಒಂದುವರೆ ವರ್ಷಗಳಿಂದ ಆಮೆಗತಿಯಲ್ಲಿ ಕಾಮಗಾರಿ ನಡೆದಿದೆ.

Advertisement

ಈ ಘಟಕವನ್ನು ತಾಲೂಕಿನಲ್ಲಿ ಒಂದು ಮಾದರಿ ತ್ಯಾಜ್ಯ ವಿಲೇವಾರಿ ಘಟಕವಾಗಬೇಕು ಎಂದು 2020ರಲ್ಲಿ ಚಾಲನೆ ನೀಡಿದರು. ಇದುವರೆಗೂ ತ್ಯಾಜ್ಯ ವಿಲೇವಾರಿ ಘಟಕ ಇನ್ನೂ ಆರಂಭವಾಗಿ. ರಾಜ್ಯದ ಎಲ್ಲಾ ಗ್ರಾಪಂಗಳ ಗ್ರಾಮಗಳು ಸ್ವಚ್ಛತೆಯ ಜೊತಗೆ ನಿಮ್ಮ ಆರೋಗ್ಯ ರಕ್ಷಣ ಮಾಡುವ ಉದ್ದೇಶದಿಂದ ಸರಕಾರ ಈ ಯೋಜನೆಯನ್ನು ಜಾರಿಗೆ ತಂದ್ದಿದೆ. ಇದರಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ. ಗ್ರಾಪಂಗಳಿAದ ಪ್ರತಿ ಮನೆಗಳಿಗೆ ಎರಡರಂತೆ ಕಸದ ಬುಟ್ಟಿಗಳನ್ನು ನೀಡಲಾಗುತ್ತದೆ. ಒಂದರಲ್ಲಿ ಒಣಗಿದ ಕಸ ಹಾಗೂ ಇನ್ನೊಂದರಲ್ಲಿ ಹಸಿ ಕಸ ಹಾಕಬೇಕು. ಇದನ್ನು ಕಸದ ವಾಹನ ಬಂದಾಗ ಅದರಲ್ಲಿ ಹಾಕಬೇಕು. ಪ್ರತಿ ಗ್ರಾಪಂಗೆ ತಲಾ 20 ಲಕ್ಷ ರೂ. ನೆರವು ನೀಡುತ್ತಾರೆ. ಇದರಲ್ಲಿ ಕಸ ಸಂಗ್ರಹಣೆಯ ವಾಹನ, ಕಸದ ಬುಟ್ಟಿ, ಮತ್ತಿತರ ಪರಿಕರಗಳನ್ನು ಖರೀದಿ ಮಾಡಬಹುದು, ಜೊತಗೆ ಹಣದ ಕೊರತೆಯಾದರೇ ಎನ್‌ಆರ್‌ಜಿ ಯೋಜನೆಯಲ್ಲಿ ಹಣ ಖರ್ಚು ಮಾಡಬಹುದು.

ಗ್ರಾಪಂಗಳಲ್ಲಿ ಕಸದ ಬುಟ್ಟೆಗಳು: ತ್ಯಾಜ್ಯ ವಿಲೇವಾರಗೆ ಪ್ರತಿ ಗ್ರಾಪಂಗಳಿಗೆ ಸರಕಾರ ಲಕ್ಷಾಂತರ ರೂ,ಗಳ ಹಣ ಬಿಡುಗಡೆ ಮಾಡಿದೆ. ಘಟಕ ಆರಂಭಕ್ಕೆ ಮುಂಚಿತವಾಗಿ ಒಂದು ವರ್ಷದ ಹಿಂದೆ ಕಸದ ಬಟ್ಟಿಗಳನ್ನು ಗ್ರಾಪಂಗಳಿಗೆ ಸರಬರಾಜು ಮಾಡಲಾಗಿದೆ. ಕೆಲವು ಗ್ರಾಪಂಗಳಲ್ಲಿ ಬಟ್ಟೆಗಳನ್ನು ವಿತರಣೆ ಮಾಡಿದರೇ.. ಇನ್ನೂ ಕೆಲವು ಗ್ರಾಪಂಗಳಲ್ಲಿ ಕಸದ ಬಟ್ಟಿಗಳನ್ನು ವಿತರಣೆ ಮಾಡದೇ ವರ್ಷಗಳಿಂದ ಹಾಗೆ ಇಟ್ಟಿರುವುದು ಕಂಡುಬರುತ್ತಿದೆ.

ಕ್ಲಸ್ಟರ್ ಮಾದರಿಯ ಘಟಕ: ಈ ತ್ಯಾಜ್ಯ ವಿಲೇವಾರಿ ಘಟಕ ಬಿಜಕಲ್, ದೋಟಿಹಾಳ, ಕೇಸೂರ, ಕ್ಯಾದಿಗುಪ್ಪಾ ಮತ್ತು ಶಿರಗುಂಪಿ ಗ್ರಾಪಂಗಳ ಸೇರಿ ಒಂದು ಕ್ಲಸ್ಟರ್ ಮಾದರಿಯ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಲಾಗುತ್ತಿದೆ. ಇದನ್ನು ತಾಲೂಕಿನಲ್ಲಿ ಒಂದು ಮಾದರಿ ತ್ಯಾಜ್ಯ ವಿಲೇವಾರಿ ಘಟಕವಾಗಬೇಕು ಎಂದು ಆಧಿಕಾರಿಗಳು ಕನಸು ನನಸಾಗಲಿಲ್ಲ. ಕಾರಣ ಈ ಘಟಕದ ಕಾಮಗಾರಿ ಆಮೆಗತಿ ನಡೆಯುತ್ತಿದೆ. ಹೀಗಾಗಲೇ ತಾಲೂಕಿನ ಅನೇಕ ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು ಆರಂಭವಾಗಿವೆ.

ಹಳ್ಳಿಗಳಲ್ಲಿ ಕಸದ ರಾಶಿಗಳು: ಐದು ಗ್ರಾಪಂಗಳ ಪತ್ರಿ ಹಳ್ಳಿಗಳಲ್ಲಿ ಕಂಡಕAಡಲೇ ಕಸದ ರಾಶಿಗಳು ಕಾಣುತ್ತಿವೆ. ಇದನ್ನು ಪ್ರತಿ ನಿತ್ಯ ಸ್ವಚ್ಛತೆ ಮಾಡುವುದೇ ಗ್ರಾಪಂ ಸಿಬ್ಬಂದಿಗಳಿಗೆ ದೊಡ್ಡ ತಲೆನೋವಾಗಿದೆ. ಯಾವಾಗ ಘನ ತ್ಯಾಜ್ಯ ವಿಲೇವಾರಿ ಘಟಕ ಯಾವುಗ ಆರಂಭವಾಗುತ್ತದೆ ಎಂದು ಸಾರ್ವಜನಿಕರು ಮತ್ತು ಗ್ರಾಪಂ ಸಿಬ್ಬಂದಿಗಳು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.

Advertisement

ಘನ ತ್ಯಾಜ್ಯ ವಿಲೇವಾರಿ ಘಟಕದ ಭವನ ನಿರ್ಮಾಣ ಅಂತದಲ್ಲಿ ಇದೆ. ಘಟಕ ನಿರ್ಮಾಣದ ವೇಳೆ ಭೂದಾನಿಗಳಿಂದ ತೊಂದರೆ ಬಂದ ಕಾರಣ ಇಷ್ಟು ದಿನ ಕಾಮಗಾರಿ ಸ್ಥಗಿತಗೊಂಡಿತ್ತು. ಸದ್ಯ ಸಮಸ್ಯೆಯನ್ನು ಸರಿಪಡಿಸಿ ಕಾಮಗಾರಿ ಆರಂಭವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭ ಮಾಡುತ್ತೇವೆ.- ಡಾ.ಜಯರಾಮ್ ಚೌವ್ಹಾಣ,ತಾ.ಪಂ ಇಒ ಕುಷ್ಟಗಿ.

ಕೂಡಲೇ ಶಿರಗುಂಪಿ ಘನ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ತಾಪಂನಿಂದ ಮಾಹಿತಿ ಪಡೆದುಕೊಂಡು ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ.ಬಿ. ಫೌಜಿಯಾ ತರನ್ನುಮ್, ಸಿಇಓ, ಜಿಪಂ ಕೊಪ್ಪಳ

 

-ವರದಿ: ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next