Advertisement

Shirady; ಉದನೆ: ಹೆದ್ದಾರಿಯಲ್ಲಿ ಕಾಡಾನೆ ಸಂಚಾರ !

12:28 AM Jan 11, 2024 | Team Udayavani |

ಉಪ್ಪಿನಂಗಡಿ: ನಿರಂತರ ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ಕಾಡಾನೆಯೊಂದು ಕಾಣಿಸಿಕೊಂಡು ವಾಹನ ಚಾಲಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಸಾಯಂಕಾಲ ಶಿರಾಡಿ ಗ್ರಾಮದ ಉದನೆಯಲ್ಲಿ ಸಂಭವಿಸಿದೆ.

Advertisement

ಶಿರಾಡಿ ಪರಿಸರದಲ್ಲಿ ವಾಹನದ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಇನ್ನೂ ಮರೆಯಾಗುವ ಮೊದಲೇ ಉದನೆ ಪೇಟೆ ಸಮೀಪ ಗುಂಡ್ಯ ಹೊಳೆಬದಿಯಿಂದ ಬಂದ ಆನೆಯು ಯಾವುದೇ ತೊಂದರೆ ಮಾಡದೆ ರಾಷ್ಟ್ರೀಯ ಹೆದ್ದಾರಿ ದಾಟಿ ಅರಣ್ಯ ಪ್ರದೇಶಕ್ಕೆ ತೆರಳಿದ ಕಾರಣ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಶಿರಾಡಿ ಗ್ರಾಮದ ವಿವಿಧ ಕಡೆಗಳಲ್ಲಿ ಕಾಡಾನೆಗಳು ಜನರಿಗೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು ತೋಟಗಳಿಗೆ ನುಗ್ಗಿ ಬಾಳೆ, ಅಡಿಕೆ, ತೆಂಗು ಸೇರಿದಂತೆ ಇತರೇ ಕೃಷಿ ಬೆಳೆಗಳನ್ನು ಹಾನಿಗೊಳಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಲಾಗಿದೆ.

ಚೇಲಾವರ: ಕಾಡಾನೆಗಳ ಉಪಟಳ
ಮಡಿಕೇರಿ: ನರಿಯಂದಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ಪ್ರತೀ ದಿನ ಕಾಫಿಯ ತೋಟಗಳಿಗೆ ಲಗ್ಗೆ ಇಡುತ್ತಿರುವ ಆನೆಗಳು ಕಾಫಿ ಗಿಡದ ರೆಂಬೆಗಳನ್ನು ಮುರಿದು ನಷ್ಟಪಡಿಸುತ್ತಿರುವುದಲ್ಲದೇ ತೆಂಗು, ಅಡಿಕೆ, ಬಾಳೆ ಮತ್ತಿತರ ಫ‌ಸಲನ್ನು ನಾಶಪಡಿಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಕಾಫಿ ಬೆಳೆಗಾರರಾದ ಮನೆಯಪಂಡ ಧೀರಜ್‌ ತಿಮ್ಮಯ್ಯ, ಕುಟ್ಟನ ಶಶಿ ಹಾಗೂ ಕುಟ್ಟನ ಪೂವಯ್ಯ ಅವರ ತೋಟಗಳಿಗೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ನಷ್ಟವನ್ನು ಉಂಟು ಮಾಡಿವೆ.

ಜನಸಾಮಾನ್ಯರು, ವಿದ್ಯಾರ್ಥಿಗಳು ಸಂಚರಿಸಲು ಭಯಪಡುತ್ತಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next