Advertisement
ಹಾನಸದಲ್ಲಿ ಹಲವು ವರ್ಷ ನೆನಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಮಂಜೂರಾತಿ, ಶಿರಾಡಿ ಘಾಟ್‌ನಲ್ಲಿ ಸುರಂಗ ಮತ್ತು ಮೇಲ್ಸೇತುವೆ ಮಾರ್ಗ, ಹಾಸನಕ್ಕೆ ಸ್ಮಾಟ್ ರ್ಸಿಟಿ ಯೋಜನೆ, ಹಾಸನ- ಬೆಲೂರು-ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾ ಣಗಳಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಹೆಚ್ಚು ಅನುದಾನ ನೀಡುವ ನಿರೀಕ್ಷೆಯನ್ನು ಜಿಲ್ಲೆಯ ರಾಜಕಾರಣಿಗಳು ಹಾಗೂ ಜನತೆ ಹೊಂದಿದ್ದಾರೆ.
Related Articles
Advertisement
ಶಿರಾಡಿಘಾಟ್ : ಶಿರಾಡಿಘಾಟ್ ಸುರಂಗ ಎಕ್ಸ್‌ಪ್ರೆಸ್ ಹೈವೆ ಮೇಲ್ಸೇತುವೆ ನಿರೀಕ್ಷೆಯಲ್ಲಿದ್ದು ರಾಜ್ಯದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ಮೂಲಕ ಚನೈ ಬಂದರು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ-75 ಜಿಲ್ಲೆಯಲ್ಲಿ ಹಾದು ಹೋಗಿರುವುದರಿಂದ ಬೆಂಗಳೂರು-ಮಂಗಳೂರು ನಡುವೆ ಇರುವ ಶಿರಾಡಿಘಾಟ್ ರಸ್ತೆ ಮಳೆಗಾಲ ಬಂತೆಂದರೆ ಭೂ ಕುಸಿತದಿಂದ ವಾಹನ ಸಂಚಾರಕ್ಕೆ ಅನೇಕ ತೊಂದರೆ ಆಗಲಿದೆ ಹಾಗಾಗಿ ಶಿರಾಡಿಘಾಟ್ ಚತುಷ್ಟಪಥ ಸುರಂಗ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡುವ ನಿರೀಕ್ಷೆಯನ್ನು ಹೊಂದಿದ್ದಾರೆ. ಬೆಲೂರು-ಹಾಸನ-ಚಿಕ್ಕಮಗಳೂರು-ಶೃಂಗೇರಿ ರೈಲು ಮಾರ್ಗ ನಿರ್ಮಾಣದ ಸರ್ವೆ ಮುಕ್ತಾಯವಾಗಿದ್ದು ಈಗಾಗಲೆ ಚಿಕ್ಕಮಗಳೂರು-ಬೆಲೂರು- ಸಕಲೇಶಪುರ ರೈಲು ಮಾರ್ಗಕ್ಕೆ ಮಂಜೂರಾತಿ ದೊರೆತಿದೆ, ಆದರೆ ಬೆಲೂರುನಿಂದ ಸಕಲೇಶಪುರ ನಡುವೆ ರೈಲು ಮಾರ್ಗ ನಿರ್ಮಾಣದಿಂದ ಹೆಚ್ಚು ಪ್ರಯೋಜನ ವಿಲ್ಲ ಎಂಬ ಲೆಕ್ಕಾಚಾರದಿಂದ ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗವಾಗಿ ರೈಲು ಸಂಚಾರ ಮಾಡ ಬೇಕಿದೆ. ಇದಕ್ಕಾಗಿ ಸರ್ವೆಕಾರ್ಯ ಮುಗಿದಿದ್ದು 460 ಕೋಟಿ ರೂ. ಯೋಜನೆ ಅಂದಾಜು ಮಾಡಲಾಗಿದೆ.
ಈ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಣ ನೀಡಲು ಮುಂದಾದರೆ ರಾಜ್ಯದ ಮೈತ್ರಿ ಸರ್ಕಾರ ದಿಂದ ಶೇ.50ರಷ್ಟು ಅನುದಾನವನ್ನು ತಂದು ಆದಷ್ಟು ಬೇಗ ಕಾಮಗಾರಿ ಮುಕ್ತಾಯ ಮಾಡಿಸುತ್ತೇನೆ ಎಂದು ಜಿಲ್ಲಾ ಮಂತ್ರಿ ಎಚ್.ಡಿ.ರೇವಣ್ಣ ತುದಿಗಾಲಿನಲ್ಲಿ ನಿಂತಿ ದ್ದಾರೆ. ಇವರ ಆಸೆಗೆ ಇಂದು ನಡೆಯುವ ಬಜೆಟ್ ಯಾವ ರೀತಿಯಲ್ಲಿ ಪೂರಕವಾಗಲಿದೆ ಎನ್ನುವದು ತಿಳಿಯಲಿದೆ.
● ಎನ್. ನಂಜುಂಡೇಗೌಡ